Recent Posts

Monday, November 25, 2024
ಸುದ್ದಿ

ಮಜಿ ಶಾಲೆಯ ಶಿಕ್ಷಕಿಯರನ್ನ ಹುದ್ದೆಯಿಂದ ಕೈಬಿಟ್ಟ ಇಲಾಖೆ : ಆಕ್ರೋಶಗೊಂಡು ಶಾಲೆಯಲ್ಲಿ ಜಮಾಯಿಸಿದ ಪೋಷಕರು –ಕಹಳೆ ನ್ಯೂಸ್

ಮಜಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದತ್ತು ಸಂಸ್ಥೆ ವೇತನ ನೀಡಿ ಈ ಹಿಂದೆ ಇಬ್ಬರು ಶಿಕ್ಷಕರನ್ನು ನೇಮಿಸಿದ್ದು ಈ ವರ್ಷ ಅವರು ಬದಲಿಗೆ ಬೇರೆ ನಾಲ್ಕು ಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ. ಈ ಬಗ್ಗೆ ಆಕ್ರೋಶಗೊಂಡ ಮಕ್ಕಳ ಹೆತ್ತವರು ಶಾಲೆ ಮುಂಭಾಗ ಜಮಾಯಿಸಿ, ತಕ್ಷಣವೇ ಇಬ್ಬರನ್ನು ನೇಮಕ ಮಾಡಬೇಕು ಎಂದು ಪಟ್ಟು ಹಿಡಿದರು. ಎಸ್‌ಡಿಯಂ ಸಭೆಯಲ್ಲಿ ಇಬ್ಬರು ಶಿಕ್ಷಕರನ್ನು ಮುಂದುವರಿಸಲಾಗುವುದು ಎಂದು ನಿರ್ಣಯ ಕೈಗೊಂಡರೂ ಅದು ಪಾಲನೆ ಆಗಿಲ್ಲ ಎಂದು ದೂರಿದರು.

ಜಾಹೀರಾತು
ಜಾಹೀರಾತು
ಜಾಹೀರಾತು


ಶಾಲೆಯ ಅಭಿವೃದ್ಧಿ ಪಡಿಸುವ ಉದ್ದೇಶದಿಂದ ದತ್ತು ಪಡೆದಿರುವ ಸುರತ್ಕಲ್ ಮಾತ ಡೆವಲಪರ್ಸ್ ಪ್ರೈವೆಟ್ ಲಿಮಿಟಿಡ್‌ನ ಸಂತೋಷ್ ಕುಮಾರ್ ಶೆಟ್ಟಿ ಅವರು ಪ್ರತಿಕ್ರಿಯೆ ನೀಡಿ, ಮುಚ್ಚುವ ಹಂತದಲ್ಲಿದ್ದ ಈ ಶಾಲೆಯನ್ನು ದತ್ತು ಪಡೆದು ಅಭಿವೃದ್ಧಿಪಡಿಸಲಾಗಿದೆ. ವರ್ಷಕ್ಕೆ ಲಕ್ಷಾಂತರ ರೂ. ಹಣ ಹಾಕಿ ಅಭಿವೃದ್ಧಿಪಡಿಸಲಾಗಿದೆ. ಇಲ್ಲಿ ಶಾಲಾ ಕಟ್ಟಡ, ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚಳವಾಗಿದೆ. ಮುಂದಿನ ದಿನಗಳಲ್ಲಿ ಗುಣ ಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಇಲ್ಲಿ ಈಗಾಗಲೇ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರನ್ನು ಮುಂದುವರಿಸುವ ಉದ್ದೇಶದಿಂದ ಅವರನ್ನು ಸಂದರ್ಶನಕ್ಕೆ ಕರೆಯಲಾಗಿತ್ತು. ಆದರೆ ಅವರು ಆಯ್ಕೆ ಸಂದಭ೯ದಲ್ಲಿ ಬಹಿರಂಗ ಪ್ರದಶ೯ನ ನೀಡಲು ಒಪ್ಪಿರಲಿಲ್ಲ, ಆದುದ್ದರಿಂದ ಹೊಸ ಶಿಕ್ಷಕರನ್ನು ನೇಮಿಸಲಾಗಿದೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಬಗ್ಗೆ ಶಿಕ್ಷಣಾಧಿಕಾರಿಗಳ ಜತೆ ಚರ್ಚಿಸಲಾಗಿದೆ.ಸರಕಾರದ ನಿಯಮದ ಪ್ರಕಾರ ಪ್ರಕ್ರಿಯೆ ನಡೆಸುವಂತೆ ಅವರು ತಿಳಿಸಿದ್ದು, ಅದರಂತೆ ಸಭೆಯಲ್ಲಿ ಇಟ್ಟು ತೀರ್ಮಾನ ಮಾಡಲಾಗುತ್ತದೆ ಎಂದು ಶಾಲಾ ಮುಖ್ಯೋಪಾಧ್ಯಾಯ ನಾರಾಯಣ ಪೂಜಾರಿ ಅವರು ತಿಳಿಸಿದ್ದಾರೆ.