Friday, January 24, 2025
ಸುದ್ದಿ

ನುಡಿದಂತೆ ನಡೆದ ಕಾಂಗ್ರೆಸ್ ಸರ್ಕಾರಕ್ಕೆ ಬಿ.ಜನಾರ್ದನ ಪೂಜಾರಿ ಅಭಿನಂದನೆ ಸಲ್ಲಿಕೆ – ಕಹಳೆ ನ್ಯೂಸ್

ಬಂಟ್ವಾಳ: ನೂತನ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಯನ್ನು ನೀಡಿ ನುಡಿದಂತೆ ನಡೆದಿದ್ದು, ಮುಖ್ಯ ಮಂತ್ರಿ ಹಾಗೂ ಉಪಮುಖ್ಯಮಂತ್ರಿ ಜೊತೆಗೆ ಸರಕಾರದ ಎಲ್ಲಾ ಸಚಿವರಿಗೂ ವಿಶೇಷವಾಗಿ ಕೇಂದ್ರ ಮಾಜಿ ಸಚಿವ ಹಿರಿಯ ಕಾಂಗ್ರೆಸ್ ನಾಯಕ ಬಿ.ಜನಾರ್ದನ ಪೂಜಾರಿ ಅವರು ಅಭಿನಂದನೆ ಸಲ್ಲಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಜನಪರವಾದ ಸರಕಾರದ ಚಿಂತನೆ ಹಾಗೂ ಪ್ರತಿಯೊಂದು ಭರವಸೆಗಳನ್ನು ನೀಡಿರುವ ಮುಖ್ಯ ಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಜೊತೆಗೆ ಭ್ರಷ್ಟಾಚಾರ ರಹಿತವಾಗಿ ಉತ್ತಮವಾದ ಆಡಳಿತವನ್ನು ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ನೀಡಲಿ ಎಂದು ಶುಭಹಾರೈಸಿದರು.

ಮಂಗಳೂರಿಗೆ ಬಂದ ವೇಳೆ ಬೇಟಿಯಾಗುತ್ತೇನೆ: ಡಿ.ಕೆ.ಶಿ ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಅವರು ತಮ್ಮ ನಿವಾಸದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಪೋನ್ ಮೂಲಕ ಸಂಪರ್ಕ ಮಾಡಲು ಪ್ರಯತ್ನಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳ ಸಭೆಯೊಂದರಲ್ಲಿ ಭಾಗವಹಿಸಿದ್ದ ಕಾರಣ ಅವರ ಆಪ್ತಸಹಾಯಕರು ಪೋನ್ ರಿಸೀವ್ ಮಾಡಿ ಹತ್ತು ನಿಮಿಷದ ಬಳಿಕ ನಿಮನ್ನು ಸಂಪರ್ಕ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ.
ಬಳಿಕ ಉಪಮುಖ್ಯಮಂತ್ರಿ ಡಿ.ಕೆ.ಶಿ ಅವರ ಜೊತೆ ಪೋನ್ ಮೂಲಕ ಮಾತನಾಡಿದರು.

ನಮಸ್ಕಾರ ದಿಂದ ಆರಂಭವಾದ ಇವಿರಬ್ಬರ ಮಾತು ಬಳಿಕ ಪೂಜಾರಿ ಅವರ ಆರೋಗ್ಯವನ್ನು ಡಿ.ಕೆ.ಶಿ ವಿಚಾರಿಸಿದರು.
ಬಳಿಕ ಪೂಜಾರಿ ಅವರು ಡಿ.ಕೆ.ಶಿ.ಅವರಿಗೆ ಅಭಿನಂದನೆ ಸಲ್ಲಿಸಿದರು.

ನೀಡಿದ ಮಾತಿಗೆ ಬದ್ದವಾಗಿ ನಡೆದಿದ್ದೀರಿ.ನೀಡಿದ ಎಲ್ಲಾ ಭರವಸೆಯನ್ನು ರಾಜ್ಯದ ಜನತೆಗೆ ಒದಗಿಸುವ ಕಾರ್ಯಮಾಡಿದ್ದೀರಿ,ನಿಜಕ್ಕೂ ಶ್ಲಾಘನೀಯ ಕಾರ್ಯ ಎಂದು ಅಭಿನಂದನೆ ಸಲ್ಲಿಸಿದರು.
ಗೋರ್ಕಣಾಥೇಶ್ವರ ದೇವರು ನಿಮ್ಮನ್ನು ಚೆನ್ನಾಗಿಟ್ಟಿರಲಿ,ಸರಕಾರವನ್ನು ಉತ್ತಮವಾಗಿ ನಡೆಸಲು ದೇವರ ಆಶ್ರೀರ್ವಾದವಿರಲಿ ಎಂದು ಹಾರೈಸಿದರು.
ಕೆಲ ಹೊತ್ತು ಮಾತುಕತೆ ನಡೆಸಿದ ಪೂಜಾರಿ ಡಿಕೆಶಿ ಕೊನೆಯಲ್ಲಿ ನಾನು ಮಂಗಳೂರಿಗೆ ಬಂದ ಸಮಯದಲ್ಲಿ ನಿಮ್ಮನ್ನು ಬೇಟಿಯಾಗುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕೆ.ಪಿ.ಸಿ.ಸಿ.ಪ್ರಮುಖರಾದ ತಾರನಾಥ ಕಳ್ಳಿಗೆ, ಕರುಣಾಕರ ಶೆಟ್ಟಿ ಉಪಸ್ಥಿತರಿದ್ದರು