Saturday, January 25, 2025
ಸುದ್ದಿ

ಬಸುರಿ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯ ವತಿಯಿಂದ ಸೀಮಂತ ಕಾರ್ಯಕ್ರಮ – ಕಹಳೆ ನ್ಯೂಸ್

ಬಂಟ್ವಾಳ: ಪೋಲೀಸರು ಜತೆಯಾಗಿ ಬಸುರಿ ಸಹೋದ್ಯೋಗಿನಿ ಸಕ್ಕುಬಾಯಿ ಅವರಿಗೆ ಠಾಣೆಯ ವತಿಯಿಂದ ಸೀಮಂತ ಕಾರ್ಯಕ್ರಮ ನಡೆಸಿ ಬೀಳ್ಕೊಟ್ಟರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇದು ಮೆಲ್ಕಾರ್ ಟ್ರಾಫಿಕ್ ಪೋಲೀಸ್ ಠಾಣೆಯ ಎಸ್.ಐ.ಮೂರ್ತಿ ಅವರು ಮತ್ತು ಸಿಬ್ಬಂದಿಗಳ ಮಾನವೀಯ ಕೆಲಸ .
ಮಹಿಳಾ ಪೋಲೀಸ್ ಸಿಬ್ಬಂದಿ ಸಕ್ಕುಬಾಯಿ ಜೆ.ಆರ್. ಅವರು ಕೆಲಸಕ್ಕೆ ಸೇರ್ಪಡೆಯಾದ ಪ್ರಥಮ ಠಾಣೆ ಮೆಲ್ಕಾರ್ ಟ್ರಾಫಿಕ್ ಪೋಲೀಸ್ ಠಾಣೆಯಾಗಿದ್ದು,ಇಲ್ಲಿನ ಸಹದ್ಯೋಗಿಗಳು ಸೀಮಂತ ಕಾರ್ಯಕ್ರಮ ನೆರವೇರಿಸಿ ಹಾರೈಸಿದರು.

ಸಕ್ಕುಬಾಯಿ ಜೆ.ಆರ್. ಏಳುವರೆ ತಿಂಗಳ ಗರ್ಭಿಯಾಗಿದ್ದು ,ಇನ್ನು ಹೆರಿಗೆ ರಜೆಯಲ್ಲಿ ಹೋಗುವರಿದ್ದ ಕಾರಣ ಅವರನ್ನು ಇಂದು ಠಾಣೆಯ ವತಿಯಿಂದ ಸಿಹಿ ತಿಂಡಿಗಳ ಸಹಿತ ವಿವಿಧಖಾದ್ಯಗಳನ್ನು ಬಡಿಸಿ ಸರಳ ಸೀಮಂತ ಕಾರ್ಯಕ್ರಮ ನೆರವೇರಿಸಿದರು.
ಅವರು ಮೂಲತಃ ಗದಗ ಜಿಲ್ಲೆಯವರಾದ ಮಹಿಳಾ ಪೋಲೀಸ್ ಕಾನ್ಸ್ ಟೇಬಲ್.