ವಿಟ್ಲ : ಜೂನ್ 4, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ರಿಜಿಸ್ಟರ್ ವಿಟ್ಲ ಹಾಗೂ ಜನ ಜಾಗೃತಿ ವೇದಿಕೆ ವಿಟ್ಲ ಇದರ ಜಂಟಿ ಆಶ್ರಯದಲ್ಲಿ ಗುಣಶ್ರೀ ವಿದ್ಯಾಲಯ ಕುಂಡಡ್ಕ ದಲ್ಲಿ ತಂಬಾಕು ವಿರೋಧಿ ದಿನದ ಅಂಗವಾಗಿ ಮಾಹಿತಿ ಕಾರ್ಯಾಗಾರ ವಿಟ್ಲ ಮುಡ್ನೂರು ಒಕ್ಕೂಟದ ಅಧ್ಯಕ್ಷರಾದ ಬಾಲಕೃಷ್ಣ ಶೆಟ್ಟಿ ಇವರ ಅಧ್ಯಕ್ಷತೆ ಯಲ್ಲಿ ಜರಗಿತು.
ಅತಿಥಿಗಳಾಗಿದ ಆಗಮಿಸಿದ ಶಿಕ್ಷಕ ಗೋಪಾಲಕೃಷ್ಣ ಸರ್ ತಂಬಾಕಿನಲ್ಲಿರುವ ನಿಕೋಟನ್ ಎಂಬ ಅಮಲು ಪದಾರ್ಥ ಜನರನ್ನು ತಂಬಾಕು ಸೇವನೆಗೆ ಆಕರ್ಶಿಸಿ ಅದರ ದಾಸನಾಗಿಸುತ್ತದೆ.ತನ್ನ ಸ್ವಂತಿಕೆಯಿAದ ತಂಬಾಕು ಸೇವನೆಯಿಂದ ದೂರವಿರಬೇಕು ಎಂದು ಹಲವಾರು ಸ್ವಾರಸ್ಯದ ಕಥೆ ಹೇಳುವ ಮೂಲಕ ಜನರನ್ನು ತಂಬಾಕು ಸೇವನೆಯಿಂದ ಮುಕ್ತರಾಗಲು ಪ್ರೇರೇಪಿಸಿದರು
ಕಾರ್ಯಕ್ರಮದಲ್ಲಿ.ಕೃಷ್ಣಯ್ಯ ಕೆ.ವಿಟ್ಲ ಅರಮನೆ, ವಲಯದ ಮೇಲ್ವಿಚಾರಕಿ ಸರಿತಾ, ವಿಟ್ಲ ಮುಡ್ನೂರು ಒಕ್ಕೂಟದ ಸೇವಾ ಪ್ರತಿನಿಧಿ ಯಶೋಧ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.