ತನ್ನ ಪತ್ನಿಯ ಜತೆ ಅಕ್ರಮ ಸಂಬoಧವಿರಿಸಿಕೊಂಡಿರುವ ಸಂಶಯದಲ್ಲಿ ವ್ಯಕ್ತಿಯೊಬ್ಬ ಯುವಕನ ಎದೆಗೆ ರಾಡ್ನಿಂದ ಹೊಡೆದು ಕೊಲೆಗೈದ ಘಟನೆ ಕೂಳೂರಿನಲ್ಲಿ ನಡೆದಿದೆ.
ಪಶ್ಚಿಮ ಬಂಗಾಳದ ವಾಸುದೇವ ಗುನಿಯಾ (34) ಕೊಲೆಗೈದ ಆರೋಪಿ ಎಂದು ಗುರುತಿಸಲಾಗಿದ್ದು, ಆರೋಪಿಯನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ.
ಕೊಲೆಯಾದ ಯುವಕ ಬಿಕಾಸ್ ಗುನಿಯಾ ಮೂಲತಃ ಪಶ್ಚಿಮ ಬಂಗಾಳದವನಾಗಿದ್ದು, ಪ್ರಸ್ತುತ ಕುಳೂರಿನಲ್ಲಿ ವಾಸವಿದ್ದನು ಎಂದು ತಿಳಿಸು ಬಂದಿದೆ.