Recent Posts

Friday, November 22, 2024
ಕ್ರೀಡೆಸುದ್ದಿ

ಉಡಪಿಯಲ್ಲಿ ವಿಶ್ವ ಪ್ರವಾಸೋದ್ಯಮ ದಿನ ಆಚರಣೆ: ಗಮನಸೆಳೆದ ಸರ್ಫಿಂಗ್ – ಕಹಳೆ ನ್ಯೂಸ್

ಉಡಪಿ: ವಿಶ್ವ ಪ್ರವಾಸೋದ್ಯಮ ದಿನದ ಹಿನ್ನಲೆಯಲ್ಲಿ ಉಡುಪಿ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ಪ್ರವಾಸೋದ್ಯಮಕ್ಕೆ ಹೆಸರುವಾಸಿ. ಉಡುಪಿಯ ಮಲ್ಪೆ ಕಡಲಕಿನಾರೆಯಲ್ಲಿ ವಿವಿಧ ಸಾಹಸಿ ಚಟುವಟಿಕೆ ಆಯೋಜನೆ ಒಂದೆಡೆಯಾದ್ರೆ ಉಡುಪಿಯ ಬೆಂಗ್ರೆಯಲ್ಲಿ ಕೇರಳ ಮಾದರಿಯ ಬೋಟ್ ಹೌಸ್ ವಿಶ್ವಪ್ರವಾಸೋದ್ಯಮದ ದಿನದಂದು ಪ್ರವಾಸಿಗರ ಗಮನ ಸೆಳೆಯಿತು.

ಈ ಬೋಟ್ ಹೌಸ್ ಒಮ್ಮೆ ನೋಡಿ ಸ್ಟಾರ್ ಹೊಟೇಲ್‌ಗಿಂತ ಕಡಿಮೆಯೇನಿಲ್ಲ. ಕರಾವಳಿಯ ಪ್ರವಾಸೋದ್ಯಮಕ್ಕೆ ಮತ್ತೊಂದು ಮುಕುಟದಂತೆ ಆಗಮಿಸಿರೋ ಹೊಸ ಅತಿಥಿ. ಹೌದು ಇದು ಕರ್ನಾಟಕದ ಕರಾವಳಿಯಲ್ಲಿ ರಜೆಯ ಮಜಾ ಕಳೆಯಲು ಬರೋ ಪ್ರವಾಸಿಗರಿಗೆ ಹೊಸ ಅನುಭವ ನೀಡಲು ತಯಾರಾಗಿರೋ ತಿರುಮಲ ಬೋಟ್ ಹೌಸ್. ಕಳೆದ ಆರು ತಿಂಗಳ ಪರಿಶ್ರಮದಿಂದ ಕೇರಳಿಗರ ಸಹಾಯ ಪಡೆದು ಈ ಬೋಟ್ ಹೌಸ್ ನಿರ್ಮಿಸಲಾಗಿದೆ..

ಜಾಹೀರಾತು
ಜಾಹೀರಾತು
ಜಾಹೀರಾತು

ಬರೋಬ್ಬರಿ ಒಂದೂವರೆ ಕೋಟಿ ವೆಚ್ಚದ ಈ ಬೋಟ್ ನಲ್ಲಿ 5 ವಿವಿಧ ರೀತಿಯ ಲಕ್ಸುರಿ ರೂಮ್‌ಗಳು, ಬೆಡ್ ರೂಂ, ಪಾರ್ಟಿಹಾಲ್‌ಗಳೂ ಇವೆ. ಕೇರಳ ಮಾದರಿಯ ಬೊಟ್ ಹೌಸ್‌ಗಳಿಗಿಂತಲೂ ಸಖತ್ ಚೆನ್ನಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ಮುಂದೆ ಬೆಂಗ್ರೆ ಬೀಚ್‌ಗೆ ಬರೋ ಪ್ರವಾಸಿಗರನ್ನು ಕಡಲ ಅಲೆಗಳೊಂದಿಗೆ ಈ ಬೋಟ್ ಹೌಸ್ ವೆಲ್ ಕಮ್ ಮಾಡುತ್ವೆ, ಪ್ರವಾಸಿಗರಿಗೆ ಸ್ವಚ್ಛಂದವಾಗಿ ನೀರನ ಮೇಲೆ ತೇಲಾಡುವ ಅವಕಾಶವನ್ನು ಈ ಬೋಟ್ ಹೌಸ್ ನೀಡಲಿದೆ. ಇದೊಂದು ಅಪ್ಪಟ ಮನೆಯ ವಾತಾವರಣ ಹೊಂದಿದ್ದು ಸಂಪೂರ್ಣ ಮರದಿಂದಲೇ ಸಿದ್ಧಗೊಂಡಿರುವ ಟೂರಿಸ್ಟ್ ಬೋಟನ್ನು
ಹಳೆಯ ಮಾದರಿಯಲ್ಲಿ ನಿರ್ಮಿಸಲಾಗಿದೆ.

ಕೇರಳದಲ್ಲಿರೋ ಬೋಟ್ ಹೌಸ್ ಅಚ್ಚುಹೊಡೆದಂತೆ ತಯಾರಾಗಿದೆ ಈ ಬೋಟ್ ಹೌಸ್, ಪ್ರವಾಸಿಗರ ಸುರಕ್ಷತೆಗಾಗಿ ನುರಿತ ಸಲಕರಣೆಗಳನ್ನು ಜೋಡಿಸಲಾಗಿದೆ. ಅಲ್ಲದೇ 4 ಮಂದಿ ನುರಿತ ತಜ್ಞರು ಬೋಟ್ನಲ್ಲಿ ಇರುತ್ತಾರೆ. ಈ ಬೋಟ್ ಹೌಸ್ ತೇಲುತ್ತಲೇ ನೀರಲ್ಲಿ ತೇಲಿಸಾಗಿದ್ರೆ ನೋಡುವುದೇ ಕಣ್ಣಿಗೆ ಹಬ್ಬ.. ಜೊತೆಗೆ ಕಡಲ ತಡಿಯ ಸೌಂದರ್ಯದ ಜತೆಗೆ, ಹಿನ್ನೀರಿನ ಸವಿ, ಡಾಲ್ಫಿನ್ ಪೆಯಿಂಟ್, ಸೈಂಟ್ಮೆರೀಸ್  ದ್ವೀಪಗಳನ್ನು ನೋಡುತ್ತಾ ಸೂರ್ಯಾಸ್ತವನ್ನು ಸವಿಯಬಹುದು. ಬೇಸಿಗೆರಜೆಯಲ್ಲಿ ಪ್ರವಾಸಿಗರಿಗೆ ಪರಿಸರದ ಸೌಂದರ್ಯದೊಂದಿಗೆ ಮೋಜಿಗೆ ಅವಕಾಶ ನೀಡುವ ಬೋಟ್ ಹೌಸ್ ಇದಾಗಿದೆ.

ಸಮುದ್ರ ವಿಶಾಲ ನೀಲಿನೀರಿನಲ್ಲಿ ನಿಧಾನವಾಗಿ ತೇಲುತ್ತ ಸಾಗೋ ಬೋಟ್ ಹೌಸ್ ನೀಡೋ ಸುಖಾನುಭವ ಯಾವ ಸ್ಟಾರ್ ಹೊಟೇಲ್‌ಗಿಂತಲೂ ಕಡಿಮೆಯಿಲ್ಲ. ಅದರ ಜೊತೆಗೆ ಮೀನಿನ ಖಾದ್ಯವೂ ಲಭ್ಯವಿದೆ. ನಿಮ್ಮ ಜೇಬು ತುಂಬ ಹಣ ಇದ್ರೆ ಪ್ಯಾಮಿಲಿ ಸಮೇತಾರಾಗಿ ಸಮುದ್ರದಲ್ಲಿ ತೇಲಾಡುತ್ತಾ ದಿನಂಪ್ರತಿ ಎಂಜಾಯ್ ಮಾಡಬಹುದು.

ಇನ್ನು ವಿಶ್ವ ಪ್ರವಾಸೋಧ್ಯಮ ದಿನವಾದ ಇಂದು ಕಡಲಿನಲ್ಲಿ ತೇಲುವ ಈ ಅಪರೂಪದ ಸಾಹಸ ಕ್ರೀಡೆಗೆ ಉಡುಪಿಯ ಕರಾವಳಿ ತೀರ ಸಾಕ್ಷಿಯಾಗಿದೆ. ಸರ್ಫಿಂಗ್ ಎಂಬ ಸಾಹಸ ಕ್ರೀಡೆಯನ್ನು ಉತ್ತೇಜಿಸಲು ಸ್ವತ: ಸರ್ಕಾರ ಮುಂದಾಗಿದೆ. ವಿದೇಶಗಳಲ್ಲಿ ಹೆಚ್ಚು ಜನಪ್ರಿಯವಾಗಿರುವ ಈ ಕ್ರೀಡೆ, ಈಗ ಕರಾವಳಿಯಲ್ಲೂ ನೆಲೆ ಕಂಡುಕೊಳ್ಳುತ್ತಿದೆ. ಹೆಚ್ಚೇನು ಅಪಾಯಕಾರಿಯಲ್ಲದ ಉಡುಪಿಯ ಮಲ್ಪೆ ಬೀಚ್‌ನಲ್ಲಿ ಈ ಸರ್ಫಿಂಗ್ ಇಂದಿನಿಂದ ಶುರುವಾಗಿದೆ.

ಅಲೆಗಳನ್ನು ಸೀಳಲೆಂದೇ ಡಿಸೈನ್ ಮಾಡಲಾದ ಹಲಗೆಯ ಮೇಲೆ ಬ್ಯಾಲೆನ್ಸ್ ಮಾಡಿಕೊಂಡು ಸಾಗುವ ದೃಶ್ಯವಂತೂ ವಿಶ್ವಪ್ರವಾಸೋದ್ಯಮ ದಿನವಾದ ಇಂದು ನಯನ ಮನೋಹರವಾಗಿತ್ತು. ಇದೇ ವೇಳೆ ಬೀಚ್ ನಲ್ಲಿ ವಿಕಲಚೇತನರ ರಾಷ್ಟ್ರೀಯ ವಾಲಿಬಾಲ್ ಪಂದ್ಯಾಟವೂ ನಡೆಸಲಾಗುತ್ತಿದೆ.

ಇಂತಹ ಬೋಟ್ ಹೌಸ್, ಸಾಹಸ ಕ್ರೀಡೆಗಳ ಮೂಲಕ ಕರಾವಳಿ ಪ್ರವಾಸೋದ್ಯಮ ನಾನಾ ಆಯಾಮಗಳಲ್ಲಿ ತೆರೆದುಕೊಳ್ಳುತ್ತಿದೆ. ಸರ್ಫಿಂಗ್ ಇದಕ್ಕೊಂದು ಹೊಸ ಸೇರ್ಪಡೆ, ವಿದೇಶಗಳಿಂದಲೂ ಸರ್ಫಿಂಗ್ ಮಾಡೋದಕ್ಕೆ ಸಾಹಸಿಗಳು ಇಲ್ಲಿಗೆ ಬರ್ತಾರೆ. ಅಗಾಧ ಕಡಲನ್ನೆ ಮೈದಾನ ಮಾಡಿಕೊಂಡು ತೇಲುವ ಈ ಸರ್ಫಿಂಗ್ ನೋಡೋದೇ ಒಂದು ಹಬ್ಬ. ಅಂತಾರಾಷ್ಟ್ರೀಯ ಮಟ್ಟದಲ್ಲೂ ಭಾರತದ ಸರ್ಫರ್‌ಗಳು ಹೆಸರು ಮಾಡುವ ದಿನ ದೂರವಿಲ್ಲ.