‘ಕಾಂಗ್ರೆಸ್‌ನ ತಘಲಕ್ ದರ್ಬಾರ್ ಆರಂಭವಾಗಿದೆ’ ; ನಳಿನ್ ಕುಮಾರ್ ಕಟೀಲ್ ವಾಗ್ದಾಳಿ – ಕಹಳೆ ನ್ಯೂಸ್
ಈ ಕುರಿತು ಮಾತನಾಡಿದ ಅವರು, ಮಹಾತ್ಮಾ ಗಾಂಧಿಯೇ ಗೋಸಂತತಿಯ ಉಳಿವಿನ ಬಗ್ಗೆ ಮಾತನಾಡಿದರು. ಗೋವು ತಾಯಿಯ ಸ್ವರೂಪವಾಗಿದೆ. ಗೋವು ಉಳಿದರೆ ಕೃಷಿ ಉಳಿಯುತ್ತದೆ. ಸ್ವಾತಂತ್ರ್ಯ ಎಲ್ಲಾ ರಾಜ್ಯದಲ್ಲೂ ಗೋಹತ್ಯೆ ನಿಷೇಧ ಖಾಯಿದೆ ಇತ್ತು. ಕಾಂಗ್ರೆಸ್ ನ ತುಷ್ಠೀಕರಣ ನೀತಿಯಿಂದ ಖಾಯಿದೆ ವಾಪಾಸ್ ಆಗಿದೆ ಎಂದರು.
ಇನ್ನು ಸಿದ್ಧರಾಮಯ್ಯ ಸರ್ಕಾರದಲ್ಲಿ ರಾಜ್ಯದಲ್ಲಿ ಅತೀ ಹೆಚ್ಚು ಗೋಹತ್ಯೆಗಳಾಗಿದ್ದು, ಗೋ ಹಂತಕರಿಗೆ ಕಾಂಗ್ರೆಸ್ ಸರ್ಕಾರ ರಕ್ಷಣೆ ನೀಡಿದೆ. ಗೋಹತ್ಯೆ ನಿಷೇಧ ವಾಪಸ್ ತೆಗದುಕೊಂಡರೆ ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ ಎಂದಿದ್ದಾರೆ.
ರಾಷ್ಟ್ರ ಭಕ್ತ ಸೂಲಿಬೆಲೆಯನ್ನು ಬಂಧನ ಮಾಡೋದಾಗಿ ಸಚಿವರು ಹೇಳಿದ್ದಾರೆ. ಕಾಂಗ್ರೆಸ್ ಮೆರವಣಿಗೆ ಸಭೆಯಲ್ಲಿ ಪಾಕ್ ಗೆ ಜೈಕಾರ ಹಾಕಲಾಗುತ್ತಿದೆ. ಆದರೆ ಇದರ ಮೇಲೆ ಯಾವುದೇ ಕ್ರಮ ಕಾಂಗ್ರೆಸ್ ಕೈಗೊಳ್ಳುತ್ತಿಲ್ಲ. ಇದು ತುಘಲಕ್ ಸರ್ಕಾರದ ಆರಂಭದ ಹೆಜ್ಜೆಯಾಗಿದೆ. ಕಾಂಗ್ರೆಸ್ ದ್ವೇಷದ ರಾಜಕಾರಣಕ್ಕೆ ಇಳಿದಿದೆ. ಕಾಂಗ್ರೆಸ್ ನ ಜಾಯಮಾನವೇ ತುಷ್ಠೀಕರಣದ ನೀತಿ ಎಂದು ವಾಗ್ದಾಳಿ ನಡೆಸಿದ್ದಾರೆ.
ಗೋಹತ್ಯೆ ನಿಷೇಧ, ಮತಾಂತರ ನಿಷೇಧ ಖಾಯಿದೆ ರಾಜ್ಯದ ಬಹುಜನರ ಬೇಡಿಕೆಯಾಗಿದೆ. ಕಾಂಗ್ರೆಸ್ ಗೆ ಚುನಾವಣಾ ಸಂಧರ್ಭದಲ್ಲಿ ರಾಮ ಹನುಮನ ನೆನಪಾಗುತ್ತದೆ. ಚುನಾವಣಾ ಬಳಿಕ ಹಿಂದೂ ಭಾವನೆಗಳನ್ನು ಧಿಕ್ಕರಿಸುತ್ತಿದೆ. ಇದರ ಬಗ್ಗೆ ಬಿಜೆಪಿ ಹೋರಾಟವನ್ನು ಮಾಡಲಿದೆ ಎಂದರು.
ಇನ್ನು ಆರ್ ಎಸ್ ಎಸ್ ನಿಷೇಧ ಮಾಡುವ ಅಧಿಕಾರ ಕಾಂಗ್ರೆಸ್ ಗೆ ಇಲ್ಲ. ಸಿದ್ಧರಾಮಯ್ಯನ ಮುತ್ತಾತನಿಗೇ ಆರ್ ಎಸ್ ಎಸ್ ನಿಷೇಧ ಮಾಡಲು ಸಾಧ್ಯವಾಗಿಲ್ಲ. ತಾಕತ್ ಇದ್ದರೆ ಮೊದಲು ಪಾಕ್ ಪರ ಘೋಷಣೆ ಕೂಗಿದರವನ್ನು ಅರೆಸ್ಟ್ ಮಾಡಿ ಎಂದು ಹೇಳಿದ್ದಾರೆ.