Sunday, January 19, 2025
ದಕ್ಷಿಣ ಕನ್ನಡರಾಜ್ಯಸುದ್ದಿ

ಆಪ್ತನ ಶವಯಾತ್ರೆ ವೇಳೆ ಹೆಗಲು ಕೊಟ್ಟ ಸ್ಪೀಕರ್ ಯು.ಟಿ.ಖಾದರ್ – ಕಹಳೆ ನ್ಯೂಸ್

ಮಂಗಳೂರು: ಮುಡಿಪು ಗ್ರಾಮದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ ಅವರ ಸಹೋದರ ಶರತ್ ಕಾಜವ(55) ನಿನ್ನೆ(ಜೂ.04) ಹೃದಯಾಘಾತದಿಂದ ಮೃತಪಟ್ಟಿದ್ದರು. ತಮ್ಮ ಆಪ್ತನ ಸಹೋದರ ಮೃತಪಟ್ಟಿರುವ ಸುದ್ದಿ ಕೇಳಿ, ನಿಗದಿತ ಕಾರ್ಯಕ್ರಮ ರದ್ದುಗೊಳಿಸಿದ ಸ್ಪೀಕರ್ ಯು.ಟಿ.ಖಾದರ್ ಅಂತಿಮಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.

 

ಜಾಹೀರಾತು
ಜಾಹೀರಾತು
ಜಾಹೀರಾತು

ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಅವರು ಮೃತ ಶರತ್ ಕಾಜವ ಅವರ ಮನೆಗೆ ಆಗಮಿಸಿ ಕುಟುಂಬಸ್ಥರಿಗೆ ಸಾಂತ್ವಾನ ತುಂಬಿ ಧೈರ್ಯ ಹೇಳಿದರು. ಅಲ್ಲದೆ ಅಂತಿಮ ವಿಧಿ ವಿಧಾನದ ವೇಳೆ ಹಾಜರಿದ್ದು, ಕೊನೆಗೆ ಶವಯಾತ್ರೆ ವೇಳೆ ಹೆಗಲು ಕೊಟ್ಟಿದ್ದಾರೆ. ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು