Recent Posts

Monday, April 14, 2025
ಕ್ರೈಮ್ದಕ್ಷಿಣ ಕನ್ನಡಪುತ್ತೂರುಬಂಟ್ವಾಳಸುದ್ದಿ

ಕಂಬಳಬೆಟ್ಟುವಿನಲ್ಲಿ ಮಹಮ್ಮದ್‌ ಸರ್ವನ್‌ ಹಾಗೂ ಫಾರೂಕ್‌ ಗೆ ಉಸ್ಮಾನ್‌ ಆಂಡ್ ಗ್ಯಾಂಗ್ ನಿಂದ ಹಲ್ಲೆ, ಜೀವ ಬೆದರಿಕೆ – ಕಹಳೆ ನ್ಯೂಸ್

ವಿಟ್ಲ: ಹಳೆಯ ದ್ವೇಷವನ್ನಿಟ್ಟುಕೊಂಡು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಗಳನ್ನು ತಂಡವೊಂದು ಶನಿವಾರ ಕಂಬಳಬೆಟ್ಟುವಿನಲ್ಲಿ ಅಡ್ಡಗಟ್ಟಿ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಣಿನಾಲ್ಕೂರು ಗ್ರಾಮದ ಅಜಿಲಮೊಗರು ನಿವಾಸಿ ಮಹಮ್ಮದ್‌ ಸರ್ವನ್‌ (27) ಹಾಗೂ ಜತೆಗೆ ಕೆಲಸ ಮಾಡುವ ಫಾರೂಕ್‌ ಹಲ್ಲೆಗೊಳಗಾದವರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಂಬಳಬೆಟ್ಟು ಉರಿಮಜಲು ನಿವಾಸಿಗಳಾದ ಜಸೀಲ್‌, ಇಸುಬು, ಜಿಯಾದ್‌, ಉಸ್ಮಾನ್‌, ಶರೀಫ್‌ ಹಾಗೂ ಇತರ ಮೂವರು ಹಲ್ಲೆ ಮಾಡಿದ ಆರೋಪಿಗಳು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಂಬಳಬೆಟ್ಟುವಿನಲ್ಲಿ ಅಕ್ರಮ ಕೂಟ ಸೇರಿಕೊಂಡು ಮಹಮ್ಮದ್‌ ಸರ್ವನ್‌ ಅವರನ್ನು ಕಾರಿನಿಂದ ಕೆಳಗೆ ಎಳೆದು ಕೈಯಿಂದ ಮುಖಕ್ಕೆ, ಬೆನ್ನಿಗೆ, ಹೊಟ್ಟೆಗೆ ಹೊಡೆದರಲ್ಲದೇ ತುಳಿದಿದ್ದಾರೆ. ಸರ್ವನ್‌ ಜತೆ ಕೆಲಸ ಮಾಡುವ ಫಾರೂಕ್‌ ತಡೆಯಲು ಬಂದಾಗ ಮರದ ದೊಣ್ಣೆಯಿಂದ ಆತನ ತಲೆಗೆ, ಬೆನ್ನಿಗೆ ಹೊಡೆದಿದ್ದಾರೆ. ಬಳಿಕ ಜೀವ ಬೆದರಿಕೆ ಹಾಕಿ ದೊಣ್ಣೆಯನ್ನು ಅಲ್ಲೇ ಎಸೆದು ಹೋಗಿದ್ದಾರೆಂದು ವಿಟ್ಲ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಗಾಯಾಳು ಮಹಮ್ಮದ್‌ ಸರ್ವನ್‌ ವಿಟ್ಲ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದರೆ, ಫಾರೂಕ್‌ ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ