Thursday, January 23, 2025
ಸುದ್ದಿ

ಧರ್ಮಧರ್ಶಿ ಮನೋಜ್ ಕಟ್ಟೆಮಾರ್ ಹುಟ್ಟುಹಬ್ಬ : ಜೂ.11 ರಂದು “ಬೃಹತ್ ಉಚಿತ ನೇತ್ರ ತಪಾಸಣಾ ಶಿಬಿರ” –ಕಹಳೆ ನ್ಯೂಸ್

ಧರ್ಮಧರ್ಶಿಗಳಾದ ಮನೋಜ್ ಕಟ್ಟೆಮಾರ್ ಇವರ ಹುಟ್ಟು ಹಬ್ಬದ ಪ್ರಯುಕ್ತ, ರಾಜ ಕೇಸರಿ ಸಂಘಟನೆಯ 538 ಸೇವಾ ಯೋಜನೆ “ಬೃಹತ್ ಉಚಿತ ನೇತ್ರ ತಪಾಸಣಾ ಶಿಬಿರ” ವು ಶ್ರೀ ಮಂತ್ರ ದೇವತಾ ಸಾನಿಧ್ಯ ಶ್ರೀ ಕ್ಷೇತ್ರ ಕಟ್ಟೆಮಾರ್ ನಲ್ಲಿ ಇದೇ ಬರುವ ಜೂನ್ 11 ರ ಆದಿತ್ಯವಾರದಂದು ನಡೆಯಲಿದೆ.

ಶಿಬಿರವನ್ನು ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಉದ್ಘಾಟಿಸಲಿದ್ದು, ಶಾಸಕರಾದ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅಧ್ಯಕ್ಷತೆ ವಹಿಸಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಶ್ರೀ ಮೋಹನ್ ರಾಜ್ ಚೌಟ ಪುಂಜೋಳಿ ಮಾರುಗುತ್ತು ಇವರ ಶುಭ ಆಶೀರ್ವಾದದೊಂದಿಗೆ, ಶ್ರೀ ಮಂತ್ರ ದೇವತಾ ಸೇವಾ ಟ್ರಸ್ಟ್. ಅಖಿಲ ಕರ್ನಾಟಕ ರಾಜ ಕೇಸರಿ ಟ್ರಸ್ಟ್(ರಿ) ಶ್ರೀ ದೇವಿ ಅಪ್ಪಿಕಲ್ಸ್ ಉಪ್ಪಿನಂಗಡಿ ಇವುಗಳ ಜಂಟಿ ಆಶ್ರಯದಲ್ಲಿ, ಮಂಗಳೂರಿನ ನುರಿತ ಕಣ್ಣಿನ ತಜ್ಞರಾದ ಡಾ.ಸುಧೀಂದ್ರರಾವ್ ಎನ್. ಇವರ ನೇತೃತ್ವದಲ್ಲಿ ಮನೋಜ್ ಕಟ್ಟೆಮಾರ್ ಧರ್ಮದಶೀಗಳು ಶ್ರೀ ಮಂತ್ರ ದೇವತಾ ಸಾನಿಧ್ಯ ಶ್ರೀ ಕ್ಷೇತ್ರ ಕಟ್ಟೆಮಾರು ಇವರ ಹುಟ್ಟು ಹಬ್ಬದ ಪ್ರಯುಕ್ತ ರಾಜ ಕೇಸರಿ, ಸಂಘಟನೆಯ 538 ಸೇವಾ ಯೋಜನೆ ಬೃಹತ್ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ. ಶಿಬಿರವು ಬೆಳಗ್ಗೆ 9;30ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಶ್ರೀ ಮಂತ್ರ ದೇವÀತಾ ಸಾನಿಧ್ಯ ಶ್ರೀ ಕ್ಷೇತ್ರ ಕಟ್ಟೆಮಾರ್ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು