ನವದೆಹಲಿ: 14ನೇ ಆವೃತ್ತಿಯ ಏಷ್ಯಾಕಪ್‌ನ ಅಂತಿಮ ಹಣಾಹಣಿಯಲ್ಲಿ ಆಡಲಿರುವ ತಂಡಗಳು ಫಿಕ್ಸ್ ಆಗಿವೆ. ಹಾಲಿ ಚಾಂಪಿಯನ್ ಭಾರತ ಹಾಗೂ ಬಾಂಗ್ಲಾ ತಂಡಗಳು ಇಂದು ಸಂಜೆ ದುಬೈನ ಅಂಗಣದಲ್ಲಿ ಸೆಣಸಾಡಲಿವೆ.
ಬುಧವಾರದಂದು ನಡೆದ ಸೂಪರ್ 4 ಹಂತದ ನಿರ್ಣಾಯಕ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಬಾಂಗ್ಲಾದೇಶವು 37 ರನ್ ಅಂತರದ ರೋಚಕ ಗೆಲುವು ದಾಖಲಿಸಿ, ಫೈನಲ್ ಆಡುವ ಅರ್ಹತೆ ಗಿಟ್ಟಿಸಿಕೊಂಡಿತು.
239 ರನ್ ಪೇರಿಸಿದ ಬಾಂಗ್ಲಾ ದೇಶವು ಪಾಕಿಸ್ತಾನವನ್ನು 202ರನ್ ಗಳಿಗೆ ಕಟ್ಟಿ ಹಾಕುವ ಮೂಲಕ ಮೆಸ್ರಾಫೆಯ ಪಡೆ ಅರ್ಹ ಜಯ ಪಡೆಯಿತು. ಇದರಿಂದಲೇ ಫೈನಲ್ ಹಂತವನ್ನು ತಲುಪಿದೆ ಬ್ಲಾಂಗ್ಲಾ. 2016ರ ಏಷ್ಯಾಕಪ್ ಫೈನಲ್‌ನಲ್ಲಿಯೂ ಭಾರತ-ಬಾಂಗ್ಲಾ ತಂಡಗಳು ಮುಖಾಮುಖಿಯಾಗಿದ್ದವು.
ಎರಡು ವರ್ಷಗಳ ಬಳಿಕ ಭಾರತದ ವಿರುದ್ಧ ಸೇಡು ತೀರಿಸಿಕೊಳ್ಳಲು ಬಾಂಗ್ಲಾ ಸಜ್ಜಾಗುತ್ತಿದೆ. ಭಾರತ ಹಾಗೂ ಬಾಂಗ್ಲಾ ದೇಶವಲ್ಲದೆ ಈ ಟೂರ್ನಮೆಂಟ್‌ನಲ್ಲಿ ಪಾಕಿಸ್ತಾನ, ಅಫ್ಘಾನಿಸ್ತಾನ, ಶ್ರೀಲಂಕಾ, ಹಾಂಗ್ ಕಾಂಗ್ ತಂಡಗಳು ಕಣದಲ್ಲಿದ್ದವು. ಭಾರತ ಹಾಗೂ ಬಾಂಗ್ಲಾದೇಶ ತಂಡಗಳು 34 ಬಾರಿ ಪರಸ್ಪರ ಎದುರಾಗಿದ್ದು, 28 ಬಾರಿ ಭಾರತ ಗೆಲುವು ಸಾಧಿಸಿದ್ದರೆ, ಬಾಂಗ್ಲಾದೇಶ 5 ಬಾರಿ ಗೆದ್ದಿದೆ. ಒಂದು ಪಂದ್ಯದಲ್ಲಿ ಯಾವುದೇ ಫಲಿತಾಂಶ ಬಂದಿಲ್ಲ.
ರೋಹಿತ್ ಮತ್ತು ಮಸ್ರಾಫೆ ಪಡೆಗಳು ಇಂದು ಭಾರತೀಯ ಕಾಲಮಾನ 5 ಗಂಟೆಗೆ ದುಬೈನ ದುಬೈ ಇಂಟರ್‌ನ್ಯಾಶನಲ್ ಕ್ರಿಕೆಟ್ ಮೈದಾನದಲ್ಲಿ ಸೆಣಸಾಡಲಿವೆ. ಭಾರತ ತಂಡದ ಸಾರಥ್ಯ ರೋಹಿತ್ ಶರ್ಮ, ಉಪನಾಯಕನಾಗಿ ಶಿಖರ್ ಧವನ್, ಬಾಂಗ್ಲಾದೇಶ ತಂಡ ಸಾರಥ್ಯವನ್ನು ಮಸ್ರಾಫೆ ಬಿನ್ ಮೊರ್ತಾಜೋ ವಹಿಸಿಕೊಂಡಿದ್ದು ಶಕೀಬ್ ಅಲ್ ಹಸನ್ ಉಪನಾಯಕರಾಗಿದ್ದಾರೆ.
ಇಲ್ಲಿ ತನಕ ಪ್ರಮುಖ ಟೂರ್ನಮೆಂಟ್‌ನ ಅಂತಿಮ ಹೋರಾಟದಲ್ಲಿ ಭಾರತ ವಿರುದ್ಧ ಬಾಂಗ್ಲಾದೇಶ ಗೆಲುವು ಸಾಧಿಸಿಲ್ಲ. ಈ ಬಾರಿ ಸಿಕ್ಕಿರುವ ಅವಕಾಶವನ್ನು ಬಳಸಿಕೊಂಡು ಉತ್ತಮ ಪ್ರದರ್ಶನ ನೀಡಲು ಮೊರ್ತಜಾ ಪಡೆ ಸಿದ್ಧವಾಗಿದೆ. ಪಾಕ್‌ಗೆ ಮಣ್ಣುಮುಕ್ಕಿಸಿದ ಬಾಂಗ್ಲಾ ಹುಲಿಗಳು ಸಂಭ್ರದಲ್ಲಿರುವಾಗ್ಲೆ ಉತ್ತಮ ಶೋ ನೀಡಲು ಫುಲ್ ಬ್ಯುಸಿಯಾಗಿದ್ದಾರೆ. ಇಲ್ಲಿ ತನಕ ಪ್ರಮುಖ ಟೂರ್ನಮೆಂಟ್ ನ ಅಂತಿಮ ಹಣಾಹಣಿಯಲ್ಲಿ ಭಾರತ ವಿರುದ್ಧ ಬಾಂಗ್ಲಾದೇಶ ಗೆಲುವು ಸಾಧಿಸಿಲ್ಲ. ಈ ಬಾರಿ ಸಿಕ್ಕಿರುವ ಅವಕಾಶವನ್ನು ಬಳಸಿಕೊಂಡು ಉತ್ತಮ ಪ್ರದರ್ಶನ ನೀಡಲು ಮೊರ್ತಜಾ ಪಡೆ ಸಿದ್ಧವಾಗಿದೆ.