Friday, January 24, 2025
ಸುದ್ದಿ

ನಿಯಂತ್ರಣ ತಪ್ಪಿ ಡಿವೈಡರ್ ಮೇಲೇರಿದ ಕಾರು – ಕಹಳೆ ನ್ಯೂಸ್

ಕಾರೊಂದು ನಿಯಂತ್ರಣ ತಪ್ಪಿ ಪಲ್ಟಿ ಹೊಡೆದು ಡಿವೈಡರ್ ಮೇಲೇರಿದ ಘಟನೆ ಉಡುಪಿ ಜಿಲ್ಲೆಯ ಪೆರಂಪಳ್ಳಿಯಲ್ಲಿ ನಡೆದಿದೆ. ಕಾರು ಮಣಿಪಾಲದಿಂದ ಅಂಬಾಗಿಲಿನತ್ತ ತೆರಳುತ್ತಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಭಾಗದಲ್ಲಿ ಅಪಾಯಕಾರಿ ತಿರುವು ಇದ್ದು, ಇತ್ತೀಚೆಗಷ್ಟೇ ರಾತ್ರಿ ವೇಳೆ ಅಪರಿಚಿತರು ಆವರಣ ಗೋಡೆಯನ್ನು ನೆಲಸಮ ಮಾಡಿದ್ದರು. ವಾಹನ ಸವಾರರಿಗೆ ಅನುಕೂಲವಾಗುವಂತೆ ತಿರುವು ಹಾಗೂ ಸಿಗ್ನಲ್‌ಗಳ ಅಳವಡಿಕೆ ಮಾಡಿದರಷ್ಟೇ ಈ ಭಾಗದಲ್ಲಿ ಸುಗಮ ಸಂಚಾರ ಸಾಧ್ಯವಾಗಲಿದೆ. ಇಲ್ಲದಿದ್ದರೆ ಮಳೆಗಾಲದ ಸಂದರ್ಭ ಮತ್ತಷ್ಟು ಅನಾಹುತ ಎದುರಾಗುವ ಸಾಧ್ಯತೆಗಳಿವೆ.