ಪುತ್ತೂರು: ಹಿಂದಿ ಭಾಷೆಗೆ ಪ್ರಾಚೀನ ಕಾಲದಿಂದಲೇ ಮಹತ್ತರವಾದ ಸ್ಥಾನವಿದೆ. ಭಾರತದ ಆಡಳಿತ ಭಾಷೆಯಾಗಿ ಹಿಂದಿಯನ್ನು ಸ್ವೀಕರಿಸಿದ ನೆನಪಿಗಾಗಿ ಹಿಂದಿ ದಿನಾಚರಣೆಯನ್ನು ಆಚರಿಸುತ್ತಾರೆ ಈ ಭಾಷೆಯು ತನ್ನ ಪ್ರಾಮುಖ್ಯತೆಯನ್ನು ದೇಶ ವ್ಯಾಪಿ ವಿಸ್ತರಿಸಿದೆ ಎಂದು ಮೊಡಂಕಾಪು ಕಾರ್ಮೆಲ್ ಕಾಲೇಜಿನ ಉಪನ್ಯಾಸಕಿ ಚಂದ್ರಿಕಾ.ಆರ್ ರಾವ್ ಹೇಳಿದರು.
ಅವರು ಇಲ್ಲಿನ ನೆಹರುನಗರದ ವಿವೇಕಾನಂದ ಕಾಲೇಜಿನ ಹಿಂದಿ ಸಂಘ ಮತ್ತು ಐಕ್ಯುಎಸಿ ಘಟಕದ ಆಶ್ರಯದಲ್ಲಿ ಆಯೋಜನೆಗೊಂಡ ಹಿಂದಿ ದಿವಸ್” ಆಚರಣೆಯಲ್ಲಿ ಅತಿಥಿಯಾಗಿ ಭಾಗವಹಿಸಿ ಕಬೀರ್ ದಾಸರ ದೋಹೆಗಳ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.
ಹಿಂದಿ ಭಾಷೆಯಲ್ಲಿ ವಿಪುಲವಾದ ಸಾಹಿತ್ಯ ಲಭ್ಯವಿದ್ದು ಇದರಲ್ಲಿ ಕಬೀರ್ ದಾಸರಂತಹ ಸಂತರ ಕೊಡುಗೆ ಅಪಾರ. ಇವರ ಪ್ರತಿ ದೋಹೆಗಳಲ್ಲಿ ಸತ್ಯದ ವಿಚಾರಗಳು ಮತ್ತು ಗುರುವಿನ ಮಹಾತ್ಮತೆಯ ಸಂದೇಶ ಅಡಕವಾಘಿವೆ. ಕಬೀರ್ ದಾಸರು ತನಗೆ ಅಪಾರ ಜ್ಞಾನವಿದ್ದರೂ ಅಹಂಕಾರ ಮನೋಭಾವನ್ನೆಂದು ಹೊಂದಿರಲಿಲ್ಲ. ಅವರ ದೋಹೆಗಳಲ್ಲಿ ಹಿಂದಿ ಭಾಷೆಯೊಂದಿಗೆ ಇತರ ಪ್ರಾದೆಶಿಕ ಭಾಷೆಗಳು ಮಿಶ್ರಣಗೊಂಡಿದ್ದವು. ಅವು ಕೇಳುಗರಲ್ಲಿ ವಿಭನ್ನ ರೀತಿಯ ಅರ್ಥ ಕಲ್ಪಿಸಿಕೊಡಿಸುತ್ತಿದ್ದವು ಎಂದು ನುಡಿದರು.
ಕಾರ್ಯಕ್ರಮದ ಅದ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಚಾರ್ಯ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ ಹಿಂದಿ ಭಾರತದ ರಾಷ್ಟ್ರ ಭಾಷೆ. ದೇಶದಲ್ಲಿ ಅದಕ್ಕೆ ತುಂಬಾ ಮಹ್ವದ ಸ್ಥಾನವಿದೆ. ದಕ್ಷಿಣ ಭಾರತವು ಈ ಭಾಷೆಯನ್ನು ರಾಷ್ಟ್ರ ಭಾಷೆಯನ್ನಾಗಿ ಒಪ್ಪಿಕೊಳ್ಳಲು ತಾಯಾರಿಲ್ಲ ಎಂಬುದು ಬೇಸರದ ಸಂಗತಿ. ತಮ್ಮ ಪ್ರಾದೇಶಿಕ ಭಾಷೆಗೆ ಕೊಡುವ ಒತ್ತನ್ನು ಹಿಂದಿ ಭಾಷೆಗೂ ನೀಡಬೇಕು ಎಂದರು.
ಹಿಂದಿ ದಿನಾಚರಣೆ ಕೇವಲ ಒಂದುದಿನಕ್ಕೆ ಸಿಮಿತವಾಗದೇ ಅದು ರಾಷ್ಟ್ರ ಪ್ರೇಮವನ್ನು ಹೆಚ್ಚಿಸಲು ಪ್ರೇರೇಪಿಸಲು ಸಹಕಾರಿಯಾಗಬೇಕು ಎಂದರಲ್ಲದೆ ಕಬೀರ್‍ದಾಸರು ಸಮಾಜದಲ್ಲಿ ಏಕತೆಯನ್ನು ತನ್ನ ದೋಹೆಗಳ ಮೂಲಕ ಕಾರ್ಯರೂಪಕ್ಕೆ ತರಲು ಪ್ರಯತ್ನಿಸಿದ್ದಾರೆ. ಮಾನವನಿಗೆ ಜೀವನದಲ್ಲಿ ಮುಕ್ತಿ ಹೊಂದಲು ಮೂರು ಮಾರ್ಗಗಳು ಧ್ಯಾನ ಮಾರ್ಗ, ಕರ್ಮ ಮಾರ್ಗ ಮತ್ತು ಯೋಗ ಮಾರ್ಗ. ಅವರ ದೋಹೆಗಳು ಆ ಮೂರೂ ಮಾರ್ಗಗಳ ಪ್ರಾಮುಖ್ಯತೆಯನ್ನು ತೋರಿಸುತ್ತಿದ್ದವು ಎಂದು ನುಡಿದರು.
ಕಾರ್ಯಕ್ರಮದಲ್ಲಿ ಹಿಂದಿ ಸಂಘದ ಸಂಯೋಜಕಿ ಡಾ.ದುರ್ಗಾರತ್ನ ಮತ್ತು ಸಂಘದ ಜತೆ ಕಾರ್ಯದರ್ಶಿ ವಿದ್ಯಾಶ್ರೀ ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ಸಾತ್ವಿಕಾ ನಾಯಕ್ ಸ್ವಾಗತಿಸಿ, ವಿದ್ಯಾರ್ಥಿನಿ ಸನ್ನಿದಿ ವಂದಿಸಿದರು. ವಿದ್ಯಾರ್ಥಿನಿ ಆಶಾದೇವಿ ನಿರ್ವಹಿಸಿದರು.