Thursday, January 23, 2025
ಸುದ್ದಿ

ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸಧ್ಯಾನಮಂದಿರದಲ್ಲಿ ವಿಶ್ವ ಪರಿಸರ ದಿನ ಆಚರಣೆ – ಕಹಳೆ ನ್ಯೂಸ್

ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸಧ್ಯಾನಮಂದಿರದಲ್ಲಿ ವಿಶ್ವ ಪರಿಸರ ದಿನವನ್ನುಆಚರಿಸಲಾಯಿತು.
“ಪರಿಸರದೊಂದಿಗೆ ಪ್ರತಿಯೊಂದುಜೀವಿಗೂ ಭಾವನಾತ್ಮಕ ಸಂಬoಧವಿದೆ.ಪೂರ್ವಜರು ಪರಿಸರವನ್ನು ಪ್ರೀತಿಸುತ್ತಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಪೂಜನೀಯ ಭಾವನೆಯನ್ನು ಹೊಂದಿದ್ದರು.ಈ ರೀತಿಯಾಗಿ ಪರಿಸರ ಉಳಿಸುತ್ತಿದ್ದರು.ನಿಸ್ವಾರ್ಥ ಸೇವಾ ಮನೋಭಾವ ಹೊಂದಿರುವ ಈ ಭೂಮಿಯನ್ನು ತಾಯಿಎಂದುಕರೆಯುತ್ತೇವೆ. ಕೃಷಿ ಆರಂಭಿಸುವ ಮುನ್ನ ಭೂಮಿ ಪೂಜೆ, ನೀರಿಗೆಗಂಗಾಪೂಜೆ ಹೀಗೆ ಪಂಚಭೂತಗಳನ್ನು ಪೂಜಿಸುವ ಪುಣ್ಯಭೂಮಿ ಈ ಭಾರತ.ಆದರೆಪರಿಸರದ ಮಹತ್ವವನ್ನು ನಾವಿಂದು ಸ್ವತಃ ತಿಳಿದುಕೊಳ್ಳುತ್ತಿದ್ದೇವೆ. ಮಳೆಗಾಲದೊಂದಿಗೆ ಆಚರಿಸಬೇಕಾಗಿದ್ದ ಈ ವಿಶ್ವ ಪರಿಸರ ದಿನವನ್ನು ನಾವು ಇಂದು ಮಳೆಯ ಕೊರತೆ, ನೀರಿನಅಭಾವ, ಬಿಸಿಯಾದ ವಾತಾವರಣ, ಅತಿಯಾದ ಬಾಯಾರಿಕೆಯಿಂದಆಚರಿಸುತ್ತಿರುವುದು ವಿರ‍್ಯಾಸವೆಂದೆನಿಸುತ್ತಿದೆ.

ಪರಿಸರದಲ್ಲಿಎಲ್ಲವೂಉಚಿತವಾಗಿದೊರೆಯುತ್ತದೆ.ಈ ಪ್ರಕೃತಿಯ ವರದಾನವನ್ನು ಕಾಳಜಿಯಿಂದ ಬಳಸಬೇಕು.ಜೀವನದಲ್ಲಿ ಪ್ರತಿಯೊಬ್ಬರು ಸ್ವತಃ ಪರಿಸರವನ್ನುತಾನೇ ಉಳಿಸುತ್ತೇನೆ ಎಂಬ ಧ್ಯೇಯ ಹೊಂದಿದ್ದಾಗ ಮಾತ್ರ ಪರಿಸರ ಸಂರಕ್ಷಣೆ ಸಾಧ್ಯವಾಗುತ್ತದೆ.ಪರಿಸರದ ಮಡಿಲಿನಲ್ಲಿ ನಾವೀದ್ದೇವೆ, ನಮ್ಮ ಮಡಿಲಿನಲ್ಲಿ ಪರಿಸರವಿಲ್ಲ” ಎಂಬ ಎಚ್ಚರಿಕೆಯೊಂದಿಗೆ ಪರಿಸರದ ಮಹತ್ವವನ್ನು ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯಅಧ್ಯಾಪಕರಾದ ಬಾಲಕೃಷ್ಣ ತಿಳಿಸಿಕೊಟ್ಟರು.