Thursday, January 23, 2025
ಸುದ್ದಿ

ಅಪಘಾತದಿಂದ ಆಸ್ಪತ್ರೆಯಲ್ಲಿ ದಾಖಲಾಗಿರುವ ಪುತ್ತೂರಿನ ವಿದ್ಯಾರ್ಥಿನಿ ಶ್ರೀದೇವಿ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ಬಜರಂಗದಳದ ಪ್ರಮುಖರು – ಕಹಳೆ ನ್ಯೂಸ್

ಮಂಗಳೂರು ವಿಶ್ವವಿದ್ಯಾನಿಲಯದ ಎಂಕಾಂ ಪ್ರಥಮ ವರ್ಷದ ವಿದ್ಯಾರ್ಥಿನಿ ಶ್ರೀದೇವಿ ತನ್ನ ಪ್ರಖರ ಭಾಷಣಗಳಿಂದ ಯುವ ಜನರನ್ನು ಬಡಿದೆಬ್ಬಿಸುತ್ತಿದ್ದ ಯುವತಿ

ವಿಶ್ವವಿದ್ಯಾನಿಲಯದ ಸಮಾರಂಭ ಮುಗಿಸಿ ಹಿಂತಿರುಗುತ್ತಿದ್ದಾಗ ದಿನಾಂಕ 19 ರಂದು ಸಂಜೆ ಪುತ್ತೂರಿನ ತೆಂಕಿಲದಲ್ಲಿ ಅಪಘಾತಕ್ಕೀಡಾಗಿದ್ದರು ನಂತರ ಅಲ್ಲಿನ ಸ್ಥಳೀಯ ಬಜರಂಗದಳದ ಕಾರ್ಯಕರ್ತರು ಆಕೆಯನ್ನು ತಕ್ಷಣ ವಿನಾಯಕ ಚಾರಿಟೆಬಲ್ ಟ್ರಸ್ಟ್ ಬಲ್ನಾಡು ಇದರ ಅಂಬುಲೆನ್ಸ್ ನಲ್ಲಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಿ ಅಲ್ಲಿನ ಚಿಕಿತ್ಸೆ ಮುತುವರ್ಜಿ ವಹಿಸಿ ಅಲ್ಲಿನ ವೆಚ್ಚವನ್ನು ಭರಿಸಿ ನಂತರ ಹೆಚ್ಚಿನ ಚಿಕಿತ್ಸೆ ಅಗತ್ಯ ಇದ್ದುದರಿಂದ ಮಂಗಳೂರಿಗೆ ಸೇರಿಸಲಾಯಿತು. ಅವರಿಗೆ ಕಳೆದ 2 ವಾರಗಳಲ್ಲಿ ಒಟ್ಟು ಮೂರು “ಜೀವ ಉಳಿಸುವ” ಸಂಕೀರ್ಣ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಮತ್ತು ಅವರ ನಿರೀಕ್ಷಿತ ಚೇತರಿಕೆಗೆ ವೈದ್ಯಕೀಯ, ಶುಶ್ರೂಷೆ ಮತ್ತು ಭೌತಚಿಕಿತ್ಸೆಯ ಆರೈಕೆಯ ಅಗತ್ಯವಿದೆ. ಆಕೆ ನಡೆಯಲು 3 ತಿಂಗಳ ಕಾಲಾವಕಾಶ ಬೇಕಾಗುತ್ತದೆ ಎಂದು ಚಿಕಿತ್ಸೆ ನೀಡುತ್ತಿರುವ ವೈದ್ಯರು ನಂಬಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

 

ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ದಾಖಲಾಗಿರುವ ಸಂದರ್ಭ ಬಜರಂಗದಳದ ಪ್ರಾಂತ ಸಹ ಸಂಯೋಜಕ ಮುರಳೀಕೃಷ್ಣ ಹಸಂತ್ತಡ್ಕ. ಬಜರಂಗದಳದ ಪುತ್ತೂರು ಜಿಲ್ಲಾ ಸುರಕ್ಷ ಪ್ರಮುಖ್ ಜಯಂತ್ ಕುಂಜೂರುಪಂಜ ಇವರು ಭೇಟಿ ನೀಡಿ ಆರೋಗ್ಯ ವಿಚಾರಿಸಿದರು

ಆಕೆಯ ವೈದ್ಯಕೀಯ ಮತ್ತು ಆಸ್ಪತ್ರೆಯ ಬಿಲ್ ಸುಮಾರು 12 ಲಕ್ಷ ಎಂದು ಅಂದಾಜಿಸಲಾಗಿದೆ
(ಒಂದೆರಡು ಶಸ್ತ್ರಚಿಕಿತ್ಸಕರು ಮತ್ತು ವೈದ್ಯರು ತಮ್ಮ ಶುಲ್ಕವನ್ನು ಕೈಬಿಟ್ಟ ನಂತರವೂ)

ಇದೀಗ ಅವರ ಕುಟುಂಬಕ್ಕೆ ಆರ್ಥಿಕವಾಗಿ ಬೆಂಬಲದ ಅಗತ್ಯವಿದೆ.

ದಯವಿಟ್ಟು ನಿಮ್ಮ ಕೊಡುಗೆಗಳನ್ನು ಇಲ್ಲಿಗೆ ಕಳುಹಿಸಿ:

9108692576(ಶ್ರೀದೇವಿ ಕೆ) – ಗೂಗಲ್ ಪೇ

ಪ್ರೇಮಲತಾ ಕೆ – ಶ್ರೀದೇವಿ ತಾಯಿ
IIFSC–SBIN0040152
ಖಾತೆ ಸಂಖ್ಯೆ–64007174178

ಸೂಚನೆ: ಆಕೆಯನ್ನು ಮಂಗಳೂರಿನ ಮಂಗಳಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಆಸ್ಪತ್ರೆ Ph: 0824 430 3088