Sunday, January 19, 2025
ಬೆಂಗಳೂರುರಾಜ್ಯಸುದ್ದಿ

ವಂಶಪಾರಂಪರ್ಯವಾಗಿ ಅರ್ಚಕ ಹುದ್ದೆ ಪಡೆಯಲು ತಂದೆ ಕಡೆಯಿಂದ ಉತ್ತರಾಧಿಕಾರಿಯಾಗಬೇಕು: ಹೈಕೋರ್ಟ್ – ಕಹಳೆ ನ್ಯೂಸ್

ಬೆಂಗಳೂರು: ವಂಶಪಾರಂಪರ್ಯವಾಗಿ ಅರ್ಚಕ ವೃತ್ತಿ ಪಡೆಯಲು ತಂದೆ ಕಡೆಯಿಂದ ಉತ್ತರಾಧಿಕಾರ ಅಗತ್ಯ ಎಂದು ಬೆಂಗಳೂರಿನ ಹೈಕೋರ್ಟ್ ಹೇಳಿದೆ.
ದೇವಾಲಯವೊಂದರಲ್ಲಿ ತಾಯಿಯ ತಂದೆ ಮತ್ತು ತಂದೆ ಹಲವು ವರ್ಷಗಳ ಕಾಲ ಅರ್ಚಕರಾಗಿ ಪೂಜಾ ಕಾರ್ಯಗಳಲ್ಲಿ ತೊಡಗಿದ್ದು, ಅದೇ ವೃತ್ತಿಗೆ ತಮ್ಮನ್ನು ನಿಯೋಜನೆ ಮಾಡಲು ನಿರ್ದೇಶನ ನೀಡಬೇಕು ಎಂದು ಕೋರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿತ್ತು. ವಂಶಪಾರಂಪರ್ಯವಾಗಿ ದೇವಾಲಯವೊಂದರ ಅರ್ಚಕ ವೃತ್ತಿ ಪಡೆದುಕೊಳ್ಳಲು ಉತ್ತರಾಧಿಕಾರ ಸಂಬಂಧ ತಂದೆಯ ಕಡೆಯಿಂದ ಇರಬೇಕು. ತಾಯಿ ಕಡೆಯಿಂದ ಇದ್ದಲ್ಲಿ ಪರಿಗಣಿಸಲಾಗದು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.

ಎಂಎಸ್ ರವಿ ದೀಕ್ಷಿತ್ ಮತ್ತು ಅವರ ಸಹೋದರ ಎಂಎಸ್ ವೆಂಕಟೇಶ್ ದೀಕ್ಷಿತ್ ಅವರು ಆಗಸ್ಟ್ 2016ರಲ್ಲಿ ತಮ್ಮನ್ನು ದೇವಾಲಯದ ಆನುವಂಶಿಕ ಅರ್ಚಕರು ಎಂದು ಪರಿಗಣಿಸಲು ನಿರಾಕರಿಸಿದ ಆದೇಶವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದರು. ಅವರು ತಮ್ಮ ತಾಯಿಯ ಅಜ್ಜನ ನಂತರ ತಮ್ಮ ತಂದೆ ಅರ್ಚಕರಾಗಿ ಮುಂದುವರೆದರು ಮತ್ತು ಆದ್ದರಿಂದ ಈ ಹುದ್ದೆಗೆ ನಮ್ಮನ್ನು ಪರಿಗಣಿಸಬೇಕು ಎಂದು ಅರ್ಜಿಯಲ್ಲಿ ತಿಳಿಸಿದರು. ಈ ಹಿಂದೆ ದೇವಸ್ಥಾನದಲ್ಲಿರುವ ಅರ್ಚಕರು ತಮ್ಮ ತಾಯಿಯ ಅಜ್ಜನೆಂದು ಗುರುತಿಸಲ್ಪಟ್ಟಿರುವುದರಿಂದ, ದೇವಸ್ಥಾನದಲ್ಲಿ ಅರ್ಚಕರ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಸರ್ಕಾರಿ ವಕೀಲರು ವಾದಿಸಿದರು. ದಾಖಲೆಗಳನ್ನು ಅವಲೋಕಿಸಿದ ನ್ಯಾಯಮೂರ್ತಿ ಸಂಜಯ್ ಗೌಡ ಅವರು ಡಿಸೆಂಬರ್ 30, 1980ರಂದು ಕೆಆರ್ ಪುರಂ ತಹಶೀಲ್ದಾರ್ ಅವರಿಗೆ ಬರೆದ ಪತ್ರದಲ್ಲಿ, ಅರ್ಜಿದಾರರ ತಾಯಿಯ ಅಜ್ಜ ತಮ್ಮ ಅಳಿಯನನ್ನು ಅರ್ಚಕರಾಗಿ ಮುಂದುವರಿಸಲು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅರ್ಜಿದಾರರ ತಂದೆಯ ಮಾವ ದೇವಸ್ಥಾನದಲ್ಲಿ ಅರ್ಚಕರಾಗಿ ಕಾರ್ಯನಿರ್ವಹಿಸಬೇಕು ಎಂದು ಆದೇಶದಲ್ಲಿ ದಾಖಲಾಗಿರುವುದನ್ನು ನ್ಯಾಯಾಲಯ ಗಮನಿಸಿದೆ. ಅರ್ಜಿದಾರರು ತಮ್ಮ ತಾಯಿಯ ಅಜ್ಜ ಅರ್ಚಕ ಎಂಬ ಕಾರಣದಿಂದ ಅರ್ಚಕರಾಗಿ ಕಾರ್ಯನಿರ್ವಹಿಸುವ ಹಕ್ಕು ನಮ್ಮದು ಎಂದು ಪ್ರತಿಪಾದಿಸುತ್ತಿದ್ದಾರೆ ಎಂಬ ಅರ್ಜಿಯಲ್ಲಿ ತಿಳಿದು ಬಂದಿದೆ. ಆದರೆ ಇದೀಗ ಈ ಅರ್ಚಕ ಹುದ್ದೆ ಅನುವಂಶಿಕವಾಗಿಲ್ಲ ಎಂದು ಹೇಳಿದೆ. ಆನುವಂಶಿಕ ಅರ್ಚಕ ಹುದ್ದೆಯನ್ನು ಪಡೆಯಲು, ಉತ್ತರಾಧಿಕಾರವು ತಂದೆಯ ಕಡೆಯಾಗಿರಬೇಕು ಹೊರತು ತಾಯಿಯ ಕಡೆಯಲ್ಲ ಎಂದು ನ್ಯಾಯಾಲಯವು ಆದೇಶ ನೀಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು