Sunday, January 19, 2025
ಸುದ್ದಿ

ಕುಮಾರಸ್ವಾಮಿ ವಿದ್ಯಾಲಯದ ವಿದ್ಯಾರ್ಥಿನಿ ಗೌರಿತಾ ಕೆ.ಜಿ. ವಿಶ್ವ ದಾಖಲೆ – ಕಹಳೆ ನ್ಯೂಸ್

ಸುಬ್ರಹ್ಮಣ್ಯ : ದೀರ್ಘ ಸಮಯ ಬದ್ಧ ಕೋನಾಸನದಲ್ಲಿ ಇರುವ ಮೂಲಕ ಅತ್ಯಂತ ಕಿರಿಯ ವಯಸ್ಸಿನ ಗೌರಿತಾ ಕೆ. ಜಿ ವಿಶ್ವ ದಾಖಲೆಯನ್ನು ಸಾಧಿಸಿದ್ದಾಳೆ. ಬದ್ಧ ಕೋನಾಸನದಲ್ಲಿ ನಿರಂತರ 45ನಿಮಿಷ 15 ಸೆಕೆಂಡುಗಳ ಕಾಲ ಇರುವ ಮೂಲಕ ಕಲಾಂ ವರ್ಲ್ಡ್ ರೆಕಾರ್ಡ್ಸ್ ನಲ್ಲಿ ತನ್ನ ಹೆಸರನ್ನು ದಾಖಲಿಸಿದ್ದಾಳೆ.

ಕುಮಾರಸ್ವಾಮಿ ವಿದ್ಯಾಲಯದ ಮೂರನೆಯ ತರಗತಿ ವಿದ್ಯಾರ್ಥಿನಿಯಾಗಿರುವ ಗೌರಿತಾ ಕೆ. ಜಿ ಯೋಗ ಗುರು ಶರತ್ ಮರ್ಗಿಲಡ್ಕರವರ ಶಿಷ್ಯೆ. ಈಕೆ ಸಂಪಾಜೆ ಕಳಗಿ ಡಾ. ಗೌತಮ್ ಮತ್ತು ಡಾ. ರಾಜೇಶ್ವರಿ ಅವರ ಪುತ್ರಿ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು