Saturday, November 23, 2024
ಸುದ್ದಿ

ಬಿಸಿರೋಡ್ ನಲ್ಲಿ ನಡೆದಾಡಲು ಇಂಟರ್‌ಲಾಕ್ ಮತ್ತು ಹೂವಿನ ಗಾರ್ಡನ್ ನಿರ್ಮಾಣಕ್ಕೆ ಸರ್ವೇ – ಕಹಳೆ ನ್ಯೂಸ್

ಮಂಗಳೂರು: ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರ ವಿಶೇಷ ಮುತುವರ್ಜಿಯಂತೆ ಬಿ.ಸಿ.ರೋಡಿನ ಮೆಲ್ಸೇತುವೆಯ ಕೆಳಭಾಗದಲ್ಲಿ ಪಾದಚಾರಿಗಳಿಗೆ ನಡೆದಾಡಲು ಇಂಟರ್‌ಲಾಕ್ ಅಳವಡಿಸುವ ಹಾಗೂ ಹೂವಿನ ಗಾರ್ಡನ್ ನಿರ್ಮಿಸುವ ಸಲುವಾಗಿ ಶುಕ್ರವಾರ ಪಿಡಬ್ಲೂಡಿ ಹಾಗೂ ಮೆಸ್ಕಾಂ ಅಧಿಕಾರಿಗಳ ತಂಡವು ಸರ್ವೇಕಾರ್ಯ ನಡೆಸಿತು.

ಬಿ.ಸಿ.ರೋಡ್ ನಗರವನ್ನು ಸುಂದರ ನಗರವನ್ನಾಗಿ ಮಾಡುವ ದೃಷ್ಠಿಯಿಂದ ಈ ಯೋಜನೆಯನ್ನು ರೂಪಿಸಲಾಗಿದೆ. ಈ ಯೋಜನೆಯ ವೆಚ್ಚವನ್ನು ಖಾಸಗಿ ಕಂಪೆನಿಯೊಂದು ಭರಿಸಲಿದ್ದು ಕೈಕಂಬದಿಂದ ಬಿ.ಸಿ.ರೋಡ್ ನಾರಾಯಣ ವೃತ್ತದವರೆಗಿನ ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿ ದಾರಿಬೀದಿ ಅಳವಡಿಕೆ, ರಸ್ತೆಯ ಬದಿಯ ಗುಂಡಿ ಮುಚ್ಚುವ ಹಾಗೂ ಫುಟ್‌ಪಾತ್ ನಿರ್ಮಾಣ ಮಾಡಲು ಸರ್ವೇ ಕಾರ್ಯ ಮಾಡಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಅಲ್ಲದೆ, ನೂತನ ಕೆಎಸ್ಸಾರ್ಟಿಸಿ ಮುಂಭಾಗದಲ್ಲಿ ಸರ್ಕಲ್ ನಿರ್ಮಾಣ ಮಾಡಲು ನೀಲನಕ್ಷೆಯನ್ನು ರಚಿಸಲಾಯಿತು. ಈ ಸಂದರ್ಭದಲ್ಲಿ ಪುರಸಭಾ ಸದಸ್ಯ ಗೋವಿಂದ ಪ್ರಭು, ದೇವದಾಸ್ ಶೆಟ್ಟಿ ಇದ್ದರು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರ ವಿಶೇಷ ಮುತುವರ್ಜಿಯಂತೆ ಬಿ.ಸಿ.ರೋಡಿನ ಮೆಲ್ಸೇತುವೆಯ ಕೆಳಭಾಗದಲ್ಲಿ ಪಾದಚಾರಿಗಳಿಗೆ ನಡೆದಾಡಲು ಇಂಟರ್‌ಲಾಕ್ ಅಳವಡಿಸುವ ಹಾಗೂ ಹೂವಿನ ಗಾರ್ಡನ್ ನಿರ್ಮಿಸುವ ಸಲುವಾಗಿ ಶುಕ್ರವಾರ ಪಿಡಬ್ಲೂಡಿ ಹಾಗೂ ಮೆಸ್ಕಾಂ ಅಧಿಕಾರಿಗಳ ತಂಡವು ಸರ್ವೇಕಾರ್ಯವನ್ನು ನಡೆಸಿತು.

ಜಾಹೀರಾತು
ಜಾಹೀರಾತು
ಜಾಹೀರಾತು