ಪುತ್ತೂರು: ಸಂಪ್ಯದಲ್ಲಿ ಅಕ್ಷಯ ಎಜ್ಯುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ ಇದೇ ಬರುವ ಜೂ.8 ರಂದು ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಪದವಿ ಕಾಲೇಜುಗಳ ಅಂತರ್-ಕಾಲೇಜು ಮ್ಯಾನೇಜ್ಮೆಂಟ್ ಹಾಗೂ ‘ಸಾಂಸ್ಕೃತಿಕ ಫೆಸ್ಟ್’ ನಡೆಯಲಿದೆ.
ಪುತ್ತೂರು: ಸಂಪ್ಯದಲ್ಲಿ ಅಕ್ಷಯ ಎಜ್ಯುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ ಇದೇ ಬರುವ ಜೂ.8 ರಂದು ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಪದವಿ ಕಾಲೇಜುಗಳ ಅಂತರ್-ಕಾಲೇಜು ಮ್ಯಾನೇಜ್ಮೆಂಟ್ ಹಾಗೂ ‘ಸಾಂಸ್ಕೃತಿಕ ಫೆಸ್ಟ್’ ನಡೆಯಲಿದೆ.
ಮಂಗಳೂರು ವಿಶ್ವವಿದ್ಯಾನಿಲಯದ ಫೈನಾನ್ಸ್ ಆಫೀಸರ್ ಪ್ರೊ|ವೈ ಸಂಗಪ್ಪರವರು ‘ಫೆಸ್’್ಟ ನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಅಕ್ಷಯ ಕಾಲೇಜಿನ ಚೇರ್ ಮ್ಯಾನ್ ಜಯಂತ್ ನಡುಬೈಲುರವರು ವಹಿಸಿಕೊಳ್ಳಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಮಂಗಳೂರಿನ ಮಾಜಿ ಕಾರ್ಪೋರೇಟರ್ ಹಾಗೂ ಕುಳಾಯಿ ಫೌಂಡೇಶನ್‌ನ ಸ್ಥಾಪಕರು, ಅಧ್ಯಕ್ಷರೂ ಆಗಿರುವ ಪ್ರತಿಭಾ ಕುಳಾಯಿ, ಪುತ್ತೂರು ಕೆನರಾ ಬ್ಯಾಂಕಿನ ರೀಜನಲ್ ಮ್ಯಾನೇಜರ್ ವೈ ನರೇಂದ್ರ ರೆಡ್ಡಿರವರು ಪಾಲ್ಗೊಳ್ಳಲಿದ್ದಾರೆ.
ಮಂಗಳೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಗೊಳಪಟ್ಟ ಪದವಿ ಕಾಲೇಜುಗಳ ಅಂತರ್-ಕಾಲೇಜು ಸ್ಪರ್ಧಾಕೂಟ ಇದಾಗಿದ್ದು, ಸುಮಾರು 30 ರಿಂದ 35 ಕಾಲೇಜುಗಳು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಈ ಸ್ಪರ್ಧಾಕೂಟದಲ್ಲಿ ಬೆಸ್ಟ್ ಮ್ಯಾನೇಜರ್, ಮಾರ್ಕೆಟಿಂಗ್, ಫೈನಾನ್ಸ್, ಸಮೂಹ ನೃತ್ಯ, ಮೂವೀ ಸ್ಪೂಫ್, ಸ್ಟೋರಿ ಬಿಲ್ಡಿಂಗ್, ಮಲ್ಟಿ ಟಾಸ್ಕಿಂಗ್, ಪಾಟ್ ಡೆಕೋರೇಶನ್, ಫ್ಯಾಶನ್ ಶೋ, ಟ್ಯಾಟ್ಯೂಯಿಂಗ್, ಡ್ರಾಯಿಂಗ್, ಫೇಸ್ ಆಫ್ ಕೃತ್ವ ಹೀಗೆ ಒಟ್ಟು 12 ಇವೆಂಟ್‌ಗಳನ್ನು ‘ಫೆಸ್ಟ್’ ನಲ್ಲಿ ನಡೆಯಲಿದೆ.
ಇನ್ನು ಕಾಲೇಜಿನಲ್ಲಿ ಸಂಜೆ ಸಮಾರೋಪ ಕಾರ್ಯಕ್ರಮ ಆಯೋಜನೆಗೊಂಡಿದ್ದು, ಅಕ್ಷಯ ಕಾಲೇಜಿನ ಚೇರ್ ಮ್ಯಾನ್ ಜಯಂತ್ ನಡುಬೈಲುರವರು ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ಮಂಗಳೂರಿನ ವಿಝ್ಡಮ್ ಎಡ್ ನ ಡಾ|ಗುರು ತೇಜ್, ಪುತ್ತೂರು ಸ್ನೇಹ ಸಿಲ್ಕ್ಸ್ನ ಮಾಲಕ ಸತೀಶ್ ಎಸ್.ರವರು ಭಾಗವಹಿಸಲಿದ್ದಾರೆ ಎಂದು ಅಕ್ಷಯ ಕಾಲೇಜಿನ ಫೆಸ್ಟ್ ಇದರ ಸಂಯೋಜಕ ರಕ್ಷಣಾ ಟಿ.ಆರ್, ವಿದ್ಯಾರ್ಥಿ ಸಂಘದ ಅಧ್ಯಕ್ಷ ಗಗನ್ ದೀಪ್ ಎ.ಬಿ, ಕಾರ್ಯದರ್ಶಿ ಲಿಖಿತ್ ಎ.ವಿರವರು ಮಾಹಿತಿ ನೀಡಿದ್ದಾರೆ.