Sunday, January 19, 2025
ದಕ್ಷಿಣ ಕನ್ನಡಸುದ್ದಿ

ಸದ್ದಿಲ್ಲದೆ ಮಾನವೀಯತೆ ಮೆರೆದ ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ; ಯುವ ವಾಗ್ಮಿ ಶ್ರೀದೇವಿ ಚಿಕಿತ್ಸೆಗೆ ದೆಹಲಿಯಿಂದಲೇ ಸಹಾಯಹಸ್ತ – ಕಹಳೆ ನ್ಯೂಸ್

ಮಂಗಳೂರು ವಿಶ್ವವಿದ್ಯಾನಿಲಯದ ಪ್ರಥಮ ವರ್ಷದ ಎಂಕಾಮ್ ವಿದ್ಯಾರ್ಥಿನಿ ಶ್ರೀದೇವಿಯವರು ಅಪಘಾತಕ್ಕೀಡಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 10 ಲಕ್ಷಕ್ಕೂ ಅಧಿಕ ಹಣ ಚಿಕಿತ್ಸೆಗೆ ಖರ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದ್ದು ಅನೇಕ ಸಂಘ ಸಂಸ್ಥೆಗಳು ಸಹಾಯಕ್ಕೆ ಮುಂದೆ ಬಂದಿವೆ.

ಈ‌ ನಡುವೆ ರಾತ್ರಿ ವೇಳೆಯಲ್ಲಿ ವಿಚಾರ ತಿಳಿದ ದೆಹಲಿಯಲ್ಲಿದ್ದ ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಮಂಗಳೂರು ಸಂಸದರಾದ ನಳಿನ್ ಕುಮಾರ್ ಕಟೀಲು ರವರು ಕುಟುಂಬ ಸದಸ್ಯರಿಗೆ ಕರೆಮಾಡಿ ಮಾಹಿತಿ ಪಡೆದುಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕೂಡಲೇ ತಮ್ಮ ವೈಯಕ್ತಿಕ 1.50 ಲಕ್ಷ ಹಣವನ್ನು ಆಸ್ಪತ್ರೆಗೆ ತಲುಪಿಸಿದ್ದು ಮಾತ್ರವಲ್ಲದೆ ಆಸ್ಪತ್ರೆಯ ಮುಖ್ಯ ವೈದ್ಯರಿಗೆ ಕರೆಮಾಡಿ ಚಿಕಿತ್ಸೆಯ ಬಗ್ಗೆ ಸೂಚನೆ ನೀಡಿದ್ದಾರೆ. ಮುಂದಿನ ಯಾವುದೇ ಚಿಕಿತ್ಸೆ ಪಡೆಯುವುದಾದರೂ ನಾನು ಸಂಪೂರ್ಣವಾಗಿ ಸಹಕರಿಸುತ್ತೇನೆ ಎಂದು ವೈದ್ಯರು ಮತ್ತು ಕುಟುಂಬಸ್ಥರಿಗೆ ತಿಳಿಸಿದ್ದಾರೆ ಎಂದು ಕುಟುಂಬ ಸದಸ್ಯರು ಮಾಹಿತಿ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾಲೇಜಿನಿಂದ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಅಪಘಾತ ಸಂಭವಿಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಶ್ರೀದೇವಿ ಮಂಗಳೂರಿನ ಮಂಗಳಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.