Sunday, January 19, 2025
ದಕ್ಷಿಣ ಕನ್ನಡಸುದ್ದಿಸುಳ್ಯ

ಅಪಘಾತಕ್ಕಿಡಾಗಿ ಕಷ್ಟದಲ್ಲಿರುವ ಯುವ ವಾಗ್ಮಿ ಶ್ರೀದೇವಿಯವರ ಚಿಕಿತ್ಸೆಗೆ ಒಂದು ಲಕ್ಷ ನೀಡಿದ ಯುಟ್ಯೂಬರ್ ವಿಜೆ ವಿಖ್ಯಾತ್ – ಕಹಳೆ ನ್ಯೂಸ್

ಮಂಗಳೂರು ವಿಶ್ವವಿದ್ಯಾನಿಲಯದ ಪ್ರಥಮ ವರ್ಷದ ಎಂಕಾಮ್ ವಿದ್ಯಾರ್ಥಿನಿ ಶ್ರೀದೇವಿಯವರು ಅಪಘಾತಕ್ಕೀಡಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 10 ಲಕ್ಷಕ್ಕೂ ಅಧಿಕ ಹಣ ಚಿಕಿತ್ಸೆಗೆ ಖರ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದ್ದು ಅನೇಕ ಸಂಘ ಸಂಸ್ಥೆಗಳು ಸಹಾಯಕ್ಕೆ ಮುಂದೆ ಬಂದಿವೆ.

ಈ‌ ನಡುವೆ ವಿಚಾರ ತಿಳಿದ ತಕ್ಷಣ ಯೂಟ್ಯೂಬರ್ ವಿಜೆ ವಿಖ್ಯಾತ್ ತಂಡ 1 ಲಕ್ಷ ಹಣವನ್ನು ಆಸ್ಪತ್ರೆಗೆ ತೆರಳಿ ತಲುಪಿಸಿದ್ದು, ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ ಬಂದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾಲೇಜಿನಿಂದ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಅಪಘಾತ ಸಂಭವಿಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಶ್ರೀದೇವಿ ಮಂಗಳೂರಿನ ಮಂಗಳಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು