Recent Posts

Monday, January 20, 2025
ಸುದ್ದಿ

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಆಗೇ ಆಗುತ್ತೆ ಎಂದ ಹಿಂದೂ ಮುಖಂಡ ಶರಣ್ ಪಂಪ್‌ವೆಲ್ – ಕಹಳೆ ನ್ಯೂಸ್

ಮಂಗಳೂರು, ಸೆ29 : ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಆಗೇ ಆಗುತ್ತೆ ಎಂಬ ನಂಬಿಕೆ ದೇಶದ ಜನರಲ್ಲಿದೆ. ಅಯೋಧ್ಯೆಯ ರಾಮ ಮಂದಿರಕ್ಕೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಈ ದೇಶದ ಮುಸಲ್ಮಾನರು ಒಪ್ಪಲೇಬೇಕು ಎಂದು ವಿಶ್ವ ಹಿಂದೂಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಆಗ್ರಹಿಸಿದ್ದಾರೆ.

ಕಹಳೆ ನ್ಯೂಸ್ ಜೊತೆ ಮಾತನಾಡಿದ ಅವರು, ಅಯೋಧ್ಯೆ ರಾಮ ಮಂದಿರ ನಿರ್ಮಾಣದ ದಾರಿ ಸುಗಮವಾಗಿದೆ. ಕ್ರಮೇಣವಾಗಿ ಮುಸ್ಲಿಮರು ಬದಲಾಗುತ್ತಿದ್ದಾರೆ. ನಿಜ ಸಂಗತಿಯನ್ನು ಅವರು ಅರ್ಥ ಮಾಡುತ್ತಿದ್ದಾರೆ. ಕೆಲ ವಿರೋಧಿಗಳು ಮಾತ್ರ ರಾಮ ಮಂದಿರ ನಿರ್ಮಾಣವಾಗದಂತೆ ಉಪಾಯವನ್ನು ಮಾಡುತ್ತಿದ್ದಾರೆ. ಅಯೋಧ್ಯೆ ರಾಮ ಮಂದಿರ  ವಿಚಾರಣೆ 5 ತಿಂಗಳೊಳಗೆ ಮುಗಿಯುವ ಸಾಧ್ಯತೆಯಿದೆ ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಶತಮಾನದ ಇತಿಹಾಸ ಇರುವ ಅಯೋಧ್ಯೆಯ ವಿಷಯದಲ್ಲಿ ದೇಶದ ಸರ್ವೋಚ್ಛ ನ್ಯಾಯಾಲಯ ನೀಡಿದ ತೀರ್ಪಿನಂತೆ ಅಯೋಧ್ಯೆಯಲಿ ರಾಮ ಮಂದಿರ ನಿರ್ಮಾಣ ಮಾಡಲು ಮುಸಲ್ಮಾನರು ಸಹಕಾರ ನೀಡಬೇಕು. ಅಯೋಧ್ಯೆಯ ಶ್ರೀ ರಾಮ ಮಂದಿರಕ್ಕೆ 400 ವರ್ಷಗಳಲ್ಲಿ 3.5 ಲಕ್ಷ ಹಿಂದುಗಳ ಬಲಿದಾನವಾಗಿದೆ. ಆ ಬಲಿದಾನಕ್ಕೆ ನ್ಯಾಯ ಸಿಗುವ ದಿನ ಹತ್ತಿರವಾಗುತ್ತಿದೆ. ಈ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಸ್ವಾಗತಾರ್ಹ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಅಯೋಧ್ಯೆಯಲ್ಲಿ ಶೀಘ್ರವೇ ರಾಮ ಮಂದಿರ ನಿರ್ಮಾಣವಾಗಬೇಕು. ಮಸೀದಿ ಎನ್ನುವುದು ಮುಸ್ಲಿಮರ ಅವಿಭಾಜ್ಯ ಅಂಗವಲ್ಲ. ನಮಾಜ್ ಮಾಡಲು ಮಸೀದಿಯೇ ಆಗಬೇಕೆಂದಿಲ್ಲ ಎಂದು ಸುಪ್ರೀಂ ಕೋರ್ಟ್ ತ್ರಿ ಸದಸ್ಯ ಪೀಠ ಮಹತ್ವದ ತೀರ್ಪು ನೀಡಿತ್ತು. ಹಾಗಾಗಿ ಅಯೋಧ್ಯೆ ರಾಮ ಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರೋ ತೀರ್ಪು ಮಹತ್ವ ಎನಿಸಲಿದೆ ಎಂದು ಹೇಳಿದ್ದಾರೆ.