Thursday, January 23, 2025
ಕ್ರೈಮ್ರಾಷ್ಟ್ರೀಯಸುದ್ದಿ

ಟಿಪ್ಪು, ಔರಂಗಜೇಬ್ ಪರ ಸ್ಟೇಟಸ್: ಕೊಲ್ಹಾಪುರದಲ್ಲಿ ಭುಗಿಲೆದ್ದ ಹಿಂಸಾಚಾರ, ಇಂಟರ್‌ನೆಟ್ ಸ್ಥಗಿತ! – ಕಹಳೆ ನ್ಯೂಸ್

ಹಾರಾಷ್ಟ್ರ ಸರ್ಕಾರ ಅಹಮ್ಮದನಗರವನ್ನು ಅಹಿಲ್ಯನಗರ ಎಂದು ಮರುನಾಮಕರಣ ಮಾಡಿದ ಬೆನ್ನಲ್ಲೇ ಕೊಲ್ಹಾಪುರದಲ್ಲಿ ಹಿಂಸಾಚಾರ ಭುಗಿಲೆದ್ದಿದೆ.

ಸರ್ಕಾರದ ನಿರ್ಧಾರಕ್ಕೆ ಪ್ರತಿಯಾಗಿ ಕೆಲ ಸಮುದಾಯದ ಮುಖಂಡರು ಸೇರಿದಂತೆ ಹಲವರು ತಮ್ಮ ವ್ಯಾಟ್ಸ್‌ಆಯಪ್‌ನಲ್ಲಿ ಔರಂಗಜೇಬ್ ಹಾಗೂ ಟಿಪ್ಪು ಸುಲ್ತಾನ್ ಫೋಟೋಗಳು, ಬರಹಳ ವ್ಯಾಟ್ಸ್‌ಆಯಪ್ ಸ್ಟೇಟಸ್ ಹಾಕಲಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜೊತೆಗೆ ಸಾಮಾಜಿ ಜಾಲತಾಣದಲ್ಲಿ ಔರಂಗಜೇಬ್ ಹಾಗೂ ಟಿಪ್ಪು ಪರ ಪೋಸ್ಟ್ ಹಾಕಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಹಾರಾಷ್ಟ್ರ ಔರಂಗಜೇಬ್ ರಾಜ್ಯ. ಇದು ಟಿಪ್ಪು ಸುಲ್ತಾನನ ರಾಜ್ಯ ಎಂದು ಬರೆಯಲಾಗಿದೆ. ಇದರಿಂದ ಕೆರಳಿದ ಹಿಂದು ಸಂಘಟನೆಗೆ ಕೊಲ್ಹಾಪುರ ಬಂದ್‌ಗೆ ಕರೆ ನೀಡಿತ್ತು. ಈ ಬಂದ್ ವೇಳೆ ಹಿಂಸಾಚಾರ ಭುಗಿಲೆದ್ದಿದೆ. ಇದೀಗ ಪರಿಸ್ಥಿತಿ ನಿಯಂತ್ರಣಕ್ಕೆ ಕೊಲ್ಹಾಪುರದಲ್ಲಿ ಇಂಟರ್‌ನೆಟ್ ಸ್ಥಗಿತಗೊಳಿಸಲಾಗಿದೆ.

ಮಹಾರಾಷ್ಟ್ರ ಛತ್ರಪತಿ ಶಿವಾಜಿಯ ರಾಜ್ಯ. ಇಲ್ಲಿ ದಾಳಿಕೋರ, ಮತಾಂಧ ಔರಂಗಜೇಬ್ ಹಾಗೂ ಟಿಪ್ಪು ಸುಲ್ತಾನನ ವೈಭವೀಕರಣ ಅಗತ್ಯವಿಲ್ಲ ಎಂದು ಹಿಂದೂ ಸಂಘಟನೆಗಳು ಬಂದ್‌ಗೆ ಕರೆ ನೀಡಿತ್ತು. ಇದನ್ನು ವಿರೋಧಿಸಿ ಮುಸ್ಲಿಂ ಸಮುದಾಯ ಪ್ರತಿಭಟನೆ ನಡೆಸಿದೆ. ಹೀಗಾಗಿ ಕೊಲ್ಹಾಪುರ ಹಿಂಸಾಚಾರ ತೀವ್ರಗೊಳ್ಳುತ್ತಿದ್ದ ಮಹಾರಾಷ್ಟ್ರ ಸರ್ಕಾರ ಹೆಚ್ಚುವರಿ ಪೊಲೀಸ್ ನಿಯೋಜಿಸಿದೆ. ಕೆಲೆವೆಡೆ ಆಶ್ರುವಾಯು ಸಿಡಿಸಲಾಗಿದೆ. ಸೂಕ್ಷ್ಮ ಪ್ರದೇಶದಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.

ಹಿಂಸಾಚಾರ ಭುಗಿಲೆದ್ದ ಬೆನ್ನಲ್ಲೇ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದು, ಯಾವುದೇ ಅಹಿತಕರ ಘಟನೆಗೆ ಅವಕಾಶವಿಲ್ಲ. ಪ್ರತಿಭಟನೆ ಶಾಂತಿಯುತವಾಗಿರಲಿ. ಹಿಂಸಾಚಾರಕ್ಕೆ ಅವಕಾಶವಿಲ್ಲ. ಇದು ಛತ್ರಪತಿ ಶಿವಾಜಿ ರಾಜ್ಯ. ಇಲ್ಲಿ ಔರಂಗಜೇಬ, ಟಿಪ್ಪು ಸುಸ್ತಾನನ ಹೊಗಳುವ ಅವಶ್ಯಕತೆ ಇಲ್ಲ. ಇತಿಹಾಸದಲ್ಲಿ ಇರುವುದನ್ನು ಹೇಳಿದರೆ ಸಾಕು ಎಂದು ಫಡ್ನವಿಸ್ ಎಚ್ಚರಿಕೆ ನೀಡಿದ್ದಾರೆ.

ಪೊಲೀಸರು ವ್ಯಾಟ್ಸ್‌ಆಯಪ್, ಸಾಮಾಜಿಕ ಮಾಧ್ಯಮದಲ್ಲಿ ಔರಂಗಜೇಬ್ ಹಾಗೂ ಟಿಪ್ಪು ಪರ ಘೋಷಣೆಗಳು, ಪೋಸ್ಟ್‌ಗಳು ಹೆಚ್ಚಾಗುತ್ತಿದ್ದಂತೆ ಕೊಲ್ಹಾಪುರದಲ್ಲಿ ಇಂಟರ್‌ನೆಟ್ ಸ್ಥಗಿತಗೊಳಿಸಲಾಗಿದೆ. ಹೆಚ್ಚುವರಿ ಪೊಲೀಸರು ಇದೀಗ ಸ್ಥಳಕ್ಕೆ ಠಿಕಾಣಿ ಹೊಡಿದ್ದಾರೆ. ಪರಿಸ್ಥಿತಿ ನಿಯಂತ್ರಣಕ್ಕೆ ತರಲಾಗಿದೆ.