ಒಂದು ಊರು ಅಲ್ಲಿ ಇರೋರೆಲ್ಲ ಕುರುಡರೇ.… ಮನುಷ್ಯರನ್ನ ಬಿಡಿ ಇಲ್ಲಿರೋ ಪ್ರಾಣಿ ಪಕ್ಷಿಗಳಿಗೋ ಕಣ್ಣು ಕಾಣೋದಿಲ್ಲ ಅಂತ ಹೇಳಿದ್ರೆ ನೀವು ನಂಬ್ತೀರಾ..? ಆದ್ರೆ ಇದು ನಿಜ..
ಮೆಕ್ಸಿಕೋ ದೇಶದ ಟಿಲ್ಟೆಪಾಕ್ ಗ್ರಾಮದಲ್ಲಿ ವಾಸಿಸುವ ಬುಡಕಟ್ಟಿನ ಪ್ರತಿಯೊಬ್ಬ ಮನುಷ್ಯನೂ ಕುರುಡರಾಗಿದ್ದಾರೆ. ಇದು ವಿಶ್ವದ ನಿಗೂಢ ಹಳ್ಳಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಇಲ್ಲಿ ಮಗು ಜನಿಸಿದಾಗ ಅವನ ಕಣ್ಣುಗಳು ಚೆನ್ನಾಗಿದ್ದರೂ ಕ್ರಮೇಣ ಅವನ ದೃಷ್ಟಿ ಹೋಗಲಾರಂಭಿಸುತ್ತದೆ.
ಈ ಗ್ರಾಮದಲ್ಲಿ ಶಾಪಗ್ರಸ್ತ ಮರ ಒಂದಿದೆ… ಈ ಮರವೇ ಇಲ್ಲಿನ ಜನರ ಕುರುಡುತನಕ್ಕೆ ಕಾರಣ ಎಂದು ಅನೇಕರು ಹೇಳುತ್ತಾರೆ. ಟಿಲ್ಟೆಪಾಕ್ ಗ್ರಾಮದ ಬುಡಕಟ್ಟು ಜನಾಂಗದ ಹಿರಿಯರ ಪ್ರಕಾರ, ಲಾವಾಜುವೆಲಾ ಎಂಬ ಹೆಸರಿನ ಈ ಮರವನ್ನು ನೋಡಿದ ನಂತರ, ಜನರು ಮಾತ್ರವಲ್ಲ ಪ್ರಾಣಿಗಳು ಸಹ ಕುರುಡಾಗುತ್ತವೆ.
ಆದರೆ, ಇದು ಮೂಢನಂಬಿಕೆ ಮಾತ್ರ ಎಂಬುದು ಅನೇಕರ ವಾದವಾಗಿದೆ. ವಿಜ್ಞಾನಿಗಳ ಪ್ರಕಾರ, ಇಲ್ಲಿ ಕುರುಡುತನಕ್ಕೆ ಕಾರಣ ಬೇರೆನೇ ಇದೆ..
ವಿಶೇಷ ಜಾತಿಯ ವಿಷಕಾರಿ ನೊಣಗಳು ಇಲ್ಲಿ ಕಂಡುಬರುತ್ತವೆ. ಈ ವಿಷಕಾರಿ ನೊಣದ ಕಡಿತವೇ ಈ ಅಂಧತ್ವಕ್ಕೆ ಕಾರಣ ಎನ್ನುತ್ತಾರೆ ವಿಜ್ಞಾನಿಗಳು.. ಇದರ ಕಡಿತದಿಂದಲೇ ಇಲ್ಲಿನ ಜನರು ಕ್ರಮೇಣ ಕುರುಡರಾಗುತ್ತಾರೆ. ಈ ನೊಣವು ಪ್ರಾಣಿಗಳ ಕುರುಡುತನಕ್ಕೂ ಕಾರಣವಾಗಿದೆ. ಮೆಕ್ಸಿಕನ್ ಸರ್ಕಾರವು ಇಲ್ಲಿನ ಜನರ ಕಲ್ಯಾಣಕ್ಕಾಗಿ ಅನೇಕ ಪ್ರಯತ್ನಗಳನ್ನ ಸತತವಾಗಿ ಮಾಡುತ್ತಲೇ ಬರುತ್ತಿದೆ…