Thursday, January 23, 2025
ಕ್ರೈಮ್ರಾಷ್ಟ್ರೀಯಸುದ್ದಿ

ಲವ್‌ ಜಿಹಾದ್‌ | ಮುಸ್ಲಿಂ ಜಿಹಾದಿ ಸಹೋದರರ ಜತೆ ಸಹೋದರಿಯರಿಬ್ಬರ ಲವ್ : ಹಬ್ಬಕ್ಕೆಂದು ಊರಿಗೆ ಬಂದವರು ದುರಂತ ಸಾವು – ಕಹಳೆ ನ್ಯೂಸ್

ಚೆನ್ನೈ: ಮನೆಯಲ್ಲಿ ಪಾಲಕರು ತಮ್ಮ ಪ್ರೀತಿಗೆ ಒಪ್ಪಿಗೆ ನೀಡಲಿಲ್ಲ ಅಂತ ಅನ್ಯಕೋಮಿನ ಸಹೋದರರಿಬ್ಬರ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದ ಇಬ್ಬರು ಸಹೋದರಿಯರು ಪ್ರಾಣ ಕಳೆದುಕೊಂಡಿರುವ ಆಘಾತಕಾರಿ ಘಟನೆ ತಮಿಳುನಾಡಿನ ತಿರುಚಿ ಜಿಲ್ಲೆಯ ವೇಲನಾಡುವಿನಲ್ಲಿ ನಡೆದಿದೆ.

ಮೃತ ಸಹೋದರಿಯರನ್ನು ಗಾಯತ್ರಿ (23) ಮತ್ತು ವಿದ್ಯಾ (21) ಎಂದು ಗುರುತಿಸಲಾಗಿದೆ. ಇಬ್ಬರೂ ವೇಲನಾಡಿನ ನಿವಾಸಿಗಳು. ತಿರುಪ್ಪೂರ್​ನ ಜವಳಿ ಮಿಲ್​ನಲ್ಲಿ ಇಬ್ಬರು ಕೆಲಸ ಮಾಡುತ್ತಿದ್ದರು. ಅದೇ ಮಿಲ್​ನಲ್ಲಿ ತಮ್ಮೊಂದಿಗೆ ಕೆಲಸ ಮಾಡುತ್ತಿದ್ದ ಮುಸ್ಲಿಂ ಸಹೋದರರನ್ನು ಪ್ರೀತಿಸುತ್ತಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

3 ಕೋಟಿ ಪ್ಯಾಕೇಜ್ ಗಿಟ್ಟಿಸಿದ ಎಲ್‌ಪಿಯು ಪದವೀಧರ!

ಜಾಹೀರಾತು
ಜಾಹೀರಾತು
ಜಾಹೀರಾತು

ಹಬ್ಬದ ಹಿನ್ನೆಲೆಯಲ್ಲಿ ರಜೆ ಪಡೆದು ಸಹೋದರಿಯರಿಬ್ಬರು ತವರಿಗೆ ಆಗಮಿಸಿದ್ದರು. ಈ ವೇಳೆ ಇಬ್ಬರು ಗಂಟೆಗಟ್ಟಲೇ ಫೋನ್​ನಲ್ಲಿ ಮಾತನಾಡುವುದನ್ನು ಕಂಡು ತಂದೆ ಪಿಚೈ ಮತ್ತು ತಾಯಿ ಅಖಿಲಾಂಡೇಶ್ವರಿಗೆ ಅನುಮಾನ ಬಂದಿದೆ. ಈ ಬಗ್ಗೆ ಇಬ್ಬರನ್ನು ವಿಚಾರಿಸಿದಾಗ ಮುಸ್ಲಿಂ ಯುವಕರನ್ನು ಪ್ರೀತಿಸುತ್ತಿರುವುದಾಗಿ ಗಾಯತ್ರಿ ಮತ್ತು ವಿದ್ಯಾ ಹೇಳಿದ್ದಾರೆ.

ಅಪ್ಪ-ಅಮ್ಮನ ಮಾತು ಕೇಳಿ ಆಘಾತ

ಮನೆಯವರು ತಮ್ಮ ಪ್ರೀತಿಗೆ ಒಪ್ಪಿಕೊಳ್ಳುತ್ತಾರೆ ಎಂಬ ನಂಬಿಕೆಯಲ್ಲಿದ್ದ ಸಹೋದರಿಯರಿಗೆ ಅಪ್ಪ-ಅಮ್ಮನ ಮಾತು ಕೇಳಿ ಆಘಾತವಾಗುತ್ತದೆ. ಅನ್ಯಧರ್ಮದ ಸಂಬಂಧವಾದ್ದರಿಂದ ಪ್ರೀತಿಯನ್ನು ತಿರಸ್ಕರಿಸುತ್ತಾರೆ. ಇದರಿಂದ ಮನನೊಂದ ಸಹೋದರಿಯರು ಮಂಗಳವಾರ ಮನೆ ಬಿಟ್ಟು ಹೋದವರು ಮರಳುವುದೇ ಇಲ್ಲ. ಇದರಿಂದ ಪಾಲಕರಿಗು ಆಘಾತವಾಗುತ್ತದೆ.

ಬಾವಿಯ ಬಳಿ ಚಪ್ಪಲಿ, ಮೊಬೈಲ್ ಪತ್ತೆ

ಗ್ರಾಮಸ್ಥರಿಗೆ ಈ ವಿಚಾರ ತಿಳಿದು ಹುಡುಕಾಡಿದಾಗ ಗ್ರಾಮದಲ್ಲಿರುವ ಬಾವಿಯ ಬಳಿ ಚಪ್ಪಲಿಗಳು ಮತ್ತು ಮೊಬೈಲ್​ ಫೋನ್​ಗಳನ್ನು ಪತ್ತೆಯಾಗುತ್ತವೆ. ಇದರಿಂದ ಅನುಮಾನಗೊಂಡು ಬಾವಿಯನ್ನು ನೋಡಿದಾಗ ಸಹೋದರಿಯರಿಬ್ಬರ ಹೆಣ ತೇಲಾಡುತ್ತಿರುವುದು ಕಂಡು ಬರುತ್ತದೆ. ಬಳಿಕ ಗ್ರಾಮಸ್ಥರ ಮಾಹಿತಿ ಮೇರೆಗೆ ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ಭೇಟಿ ನೀಡಿ ಶವಗಳನ್ನು ಮೇಲಕ್ಕಿತ್ತಿದರು.

ಸದ್ಯ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಪೊಲೀಸರು ಸಹೋದರಿಯರ ಮೊಬೈಲ್​ ಫೋನ್​ಗಳನ್ನು ಪರಿಶೀಲನೆಗೆ ಒಳಪಡಿಸಿದ್ದಾರೆ. (ಏಜೆನ್ಸೀಸ್​)