Thursday, January 23, 2025
ಸುದ್ದಿ

ಮಂಗಳೂರು ನಗರ ದ. ಕ. ಜಿ. ಪ. ಮಾ. ಹಿ. ಪ್ರಾ. ಶಾಲೆ, ಕೋಡಿಕಲ್ ಇದರ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಸಿದ ಶಾಸಕರಾದ ಡಾ ವೈ ಭರತ್ ಶೆಟ್ಟಿ – ಕಹಳೆ ನ್ಯೂಸ್

ಮಂಗಳೂರು ನಗರ ಉತ್ತರ ಕ್ಷೇತ್ರದ ಪಾಲಿಕೆ ವ್ಯಾಪ್ತಿಯ ದೇರೆಬೈಲು ಉತ್ತರ 17ನೇ ವಾರ್ಡಿನ ದ. ಕ. ಜಿ. ಪ. ಮಾ. ಹಿ. ಪ್ರಾ. ಶಾಲೆ, ಕೋಡಿಕಲ್. ಇದಕ್ಕೆ ಎಂ ಸಿ ಎಫ್ (MCF) ಸಂಸ್ಥೆಯ ಸಾಮಾಜಿಕ ಬದ್ಧತಾ ನಿಧಿಯಿಂದ ಸುಮಾರು 15 ಲಕ್ಷ ರೂಪಾಯಿಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆಯನ್ನು ಶಾಸಕರಾದ ಡಾ ವೈ ಭರತ್ ಶೆಟ್ಟಿ ರವರು ನೆರವೇರಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಸ್ಥಳೀಯ ಕಾರ್ಪೊರೇಟರ್ ಮನೋಜ್ ಕುಮಾರ್, ಕಿರಣ್ ಕುಮಾರ್, ಎಂ ಸಿ ಎಫ್ ಛಿmo ಗಿರೀಶ, ಸ್ಥಳೀಯರಾದ ಪುರುಷೋತ್ತಮ್ ಕುಲಾಲ್, ಎಸ್ ಡಿ ಎಂ ಸಿ ಅಧ್ಯಕ್ಷರಾದ ಪದ್ಮಾವತಿ, ಮುಖ್ಯೋಪಾಧ್ಯಾಯರಾದ ನಿತ್ಯಾನಂದ , ಶಾಲಾ ಅಧ್ಯಾಪಕ ವರ್ಗದವರು, ಎಂ ಸಿ ಎಫ್ ಸಂಸ್ಥೆಯ ಅಧಿಕಾರಿ ವರ್ಗದವರು, ಹಾಗೂ ಹಳೆ ವಿದ್ಯಾರ್ಥಿಗಳು ಸ್ಥಳೀಯರು ಉಪಸ್ಥಿತರಿದ್ದರು.