ಮುಂಬೈ: ಶ್ರದ್ಧಾ ವಾಕರ್ ಪ್ರಕರಣ ಮಾಸುವ ಮುನ್ನವೇ ಮುಂಬೈ ಮಹಾನಗರದಲ್ಲಿ ಮತ್ತೊಂದು ಭಯಾನಕ ಮರ್ಡರ್ ನಡೆದಿದೆ. ಯುವತಿಯ ತಲೆ ಕತ್ತರಿಸಿ ಕುಕ್ಕರ್ನಲ್ಲಿ ಬೇಯಿಸಿದ ಕಿರಾತಕನೊಬ್ಬ ಪೊಲೀಸರ ಬಲೆಗೆ ಬಿದ್ದಿದ್ದಾನೆ..
ಲೀವಿಂಗ್ ಟುಗೆದರ್ನಲ್ಲಿದ್ದ ಯುವತಿಯ ತಲೆ ಕತ್ತರಿಸಿ ಕೊಲೆ ಮಾಡಿರುವ ಅಮಾನುಷ ಘಟನೆ ಮುಂಬೈನ ಮೀರಾ ರೋಡ್ನ ಅಪಾರ್ಟ್ಮೆಂಟ್ನಲ್ಲಿ ನಡೆದಿದೆ. 32 ವರ್ಷದ ಸರಸ್ವತಿ ವೈದ್ಯರನ್ನು 56 ವರ್ಷದ ಮನೋಜ್ ಸಹಾನಿ ಹತ್ಯೆ ಮಾಡಿದ್ದಾನೆ.
ಯುವತಿಯನ್ನು ಕೊಲೆ ಮಾಡಿದ ಬಳಿಕ ಮನೋಜ್ ಸಹಾನಿ ಆಕೆಯ ದೇಹವನ್ನು 20 ತುಂಡುಗಳಾಗಿ ಕತ್ತರಿಸಿದ್ದಾನೆ. ಬಳಿಕ ದೇಹದ ತುಂಡುಗಳನ್ನು ಕುಕ್ಕರ್ಗೆ ಹಾಕಿ ಗ್ಯಾಸ್ ಸ್ಟೌವ್ನಲ್ಲಿ ಬೇಯಿಸಿದ್ದಾನೆ. ಅಪಾರ್ಟ್ಮೆಂಟ್ನ 704 ನಂಬರ್ನ ಪ್ಲ್ಯಾಟ್ನಲ್ಲಿ ವಾಸನೆ ಬಂದಿದ್ದರಿಂದ ಅಕ್ಕಪಕ್ಕದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದಾಗ ಯುವತಿಯ ಭಯಾನಕ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.
ಮುಂಬೈನ ಮೀರಾ ರೋಡ್ ಅತ್ಯಂತ ಜನನಿಬಿಡ ಪ್ರದೇಶವಾಗಿದೆ. ಇಲ್ಲಿ ಈ ರೀತಿಯ ಮರ್ಡರ್ ನಡೆದಿರೋದು ಸ್ಥಳೀಯರನ್ನ ಬೆಚ್ಚಿಬೀಳಿಸಿದೆ. ಪ್ರಕರಣ ದಾಖಲಿಸಿಕೊಂಡ ನಯಾನಗರ ಪೊಲೀಸರು ಪರಾರಿಯಾಗಿದ್ದ ಮನೋಜ್ ಸಹಾನಿಯನ್ನು ಬಂಧಿಸಿದ್ದಾರೆ. 56 ವರ್ಷದ ಮನೋಜ್ ಸಹಾನಿ ಇಷ್ಟೊಂದು ಕ್ರೂರಿವಾಗಿ ಕೊಲೆ ಮಾಡಿದ್ದಕ್ಕೆ ಕಾರಣ ಏನು ಅನ್ನೋದು ತನಿಖೆಯಿಂದ ಹೊರ ಬರಬೇಕಿದೆ.