Recent Posts

Monday, January 20, 2025
ಸುದ್ದಿ

ಸಿಡಿಲು ಬಡಿದು ಜಾನುವಾರುಗಳು ಸಾವು – ಕಹಳೆ ನ್ಯೂಸ್

ಮೂಡಬಿದ್ರೆ: ಸಿಡಿಲು ಬಡಿದು ಒಟ್ಟು ನಾಲ್ಕು ದನಗಳು ಸಾವನ್ನಪ್ಪಿದ ಘಟನೆ ಪಡುಮಾರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂಡುಮಾರ್ನಾಡಿನ ತಂಡ್ರಕೆರೆಯಲ್ಲಿ ಶುಕ್ರವಾರ ಸಂಜೆ ನಡೆದಿದೆ.

ಸುಜಾತ ಎಂಬರಿಗೆ ಸೇರಿದ ಮೂರು ಮತ್ತು ಸುಧಾಕರ ಎಂಬರಿಗೆ ಸೇರಿದ ಒಂದು ಸೇರಿ ಒಟ್ಟು ನಾಲ್ಕು ದನಗಳು ಸಿಡಿಲಿನ ಹೊಡೆತಕ್ಕೆ ಬಲಿಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಹಸುಗಳು ಮನೆಯ ಸಮೀಪದ ಗುಡ್ಡದಲ್ಲಿ ಮೇಯುತಿದ್ದವು. ಈ ಸಂದರ್ಭದಲ್ಲಿ ಸಿಡಿಲು ಮರಕ್ಕೆ ಬಡಿದಿದ್ದು, ಸಿಡಿಲಿನ ಝಳಕ್ಕೆ ದನಗಳು ಪ್ರಾಣ ಕಳೆದುಕೊಂಡಿವೆ. ಘಟನಾ ಸ್ಥಳಕ್ಕೆ ಪಂಚಾಯತ್ ಅಧ್ಯಕ್ಷ ಶ್ರೀನಾಥ್ ಎಸ್.ಸುವರ್ಣ ಭೇಟಿ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು