Thursday, January 23, 2025
ಸುದ್ದಿ

ರೈಲು ದುರಂತದಲ್ಲಿ ನನ್ನ ಪತಿ ತೀರಿಹೋದ..! : ಸುಳ್ಳು ಹೇಳಿ ಪರಿಹಾರ ಪಡೆದುಕೊಳ್ಳಲು ಹೊರಟ ಮಹಿಳೆಯ ನಾಟಕ ಬಯಲು –ಕಹಳೆ ನ್ಯೂಸ್

ಕಳೆದ ಶುಕ್ರವಾರ ನಡೆದ ಓಡಿಶಾ ಬಾಲಸೋರ್ ತ್ರಿವಳಿ ರೈಲು ದುರಂತ ವಿಶ್ವವನ್ನೇ ಬೆಚ್ಚಿಬೀಳಿಸಿದೆ. 278 ಮಂದಿಯನ್ನು ಬಲಿ ಪಡೆದು ಸಾವಿರಾರು ಮಂದಿಯನ್ನು ಆಸ್ಪತ್ರೆಗೆ ಸೇರಿದ್ದಾರೆ. ಅತ್ತ ಮನೆ ಮಂದಿಯನ್ನ ಕಳೆದುಕೊಂಡವರು ಕಂಬನಿ ಮುಡಿಯುತ್ತಿದ್ರೆ.. ಇತ್ತ ಸುಳ್ಳು ಹೇಳಿ ಸರಕಾರದ ಪರಿಹಾರ ಪಡೆದುಕೊಳ್ಳುವ ನಾಟಕ ನಡೆಯುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಓಡಿಶಾ ಬಾಲಸೋರ್ ತ್ರಿವಳಿ ರೈಲು ದುರಂತಕ್ಕೆ ಬಲಿಯಾದ ಕುಟುಂಬದವರಿಗೆ ಕೇಂದ್ರ ಸರ್ಕಾರದಿಂದ ಪರಿಹಾರ ನೀಡ್ತಾ ಇದೆ. ಇದನ್ನ ಲಾಭವಾಗಿ ಬಳಸಿಕೊಂಡ ಮಹಿಳೆಯೊಬ್ಬರು ಸುಳ್ಳು ಹೇಳಿ ಪರಿಹಾರ ತೆಗೆದುಕೊಳ್ಳಲು ಹೋಗಿ ಬಂಧನದ ಭೀತಿ ಎದುರಿಸುತ್ತಿದ್ದಾಳೆ.
ಒಡಿಶಾ ಬಾಲಸೋರ್ ರೈಲು ಅಪಘಾತದಲ್ಲಿ ಪತಿಯ ಸಾವಾಗಿದೆ ಎಂದು ಮಹಿಳೆಯೊಬ್ಬಳು ಅವಲತ್ತುಕೊಂಡು ಕೇಂದ್ರ ಸರ್ಕಾರ ಘೋಷಿಸಿದ್ದ 10 ಲಕ್ಷ ರೂಪಾಯಿ ಪರಿಹಾರ ಪಡೆಯಲು ಸಂಚು ಹೂಡಿದ್ದಳು.

ಬಾಲಾಸೂರ್‌ನಲ್ಲಿ ಜೂನ್ 2ರಂದು ನಡೆದ ದುರಂತದಲ್ಲಿ ತನ್ನ ಪತಿ ಬಿಜಯ್‌ದತ್ತಾ ಸಾವನ್ನಪ್ಪಿದ್ದಾರೆ ಎಂದು ಗೀತಾಂಜಲಿ ದತ್ತಾ ಹೇಳಿಕೊಂಡಿದ್ದಳು. ಅಲ್ಲದೇ ನೂರಾರು ಶವಗಳ ರಾಶಿ ಮಧ್ಯೆ ಮೃತದೇಹವೊಂದನ್ನು ಗುರುತಿಸಿ ಇದು ತನ್ನ ಪತಿಯದ್ದೇ ಅಂತ ಕಣ್ಣೀರು ಹಾಕಿದ್ದಳು. ಮಹಿಳೆಯ ಹೇಳಿಕೆ ಪಡೆದ ಅಧಿಕಾರಿಗಳು ಮೃತ ವ್ಯಕ್ತಿ ಮತ್ತು ಮಹಿಳೆ ನೀಡಿದ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ಆಕೆಯು ಸುಳ್ಳು ಹೇಳಿ ಪರಿಹಾರ ಪಡೆಯಲು ಮುಂದಾಗಿರುವುದು ಗೊತ್ತಾಗಿದೆ. ಹೀಗಾಗಿ ಪೊಲೀಸರು ಎಚ್ಚರಿಕೆ ನೀಡಿ ಆಕೆಯನ್ನು ಕಳುಹಿಸಿದ್ದಾರೆ. ಆದ್ರೆ ಈ ಬಗ್ಗೆ ಪತಿಯೇ ಪೊಲೀಸರಿಗೆ ದೂರನ್ನ ನೀಡಿದ್ದು ಗೀತಾಂಜಲಿ ದತ್ತಾ ಸಂಕಷ್ಟಕ್ಕೆ ಸಿಲುಕಿದ್ದಾಳೆ. ಬಂಧನದ ಭೀತಿಯಿಂದ ಮಹಿಳೆ ತಲೆಮರೆಸಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.