Thursday, January 23, 2025
ಸುದ್ದಿ

ಬಸ್ ಮತ್ತು ಸ್ಕೂಟಿ ನಡುವೆ ಭೀಕರ ಅಪಘಾತ – ಸವಾರ ಸ್ಥಳದಲ್ಲೇ‌ ಸಾವು – ಕಹಳೆ ನ್ಯೂಸ್

ಕಾರ್ಕಳ : ಬೈಲೂರು ಕೆಳಪೇಟೆಯಲ್ಲಿ ಬಸ್ ಮತ್ತು ಸ್ಕೂಟಿ ನಡುವೆ‌ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಜೂ.8 ರಂದು ರಾತ್ರಿ ನಡೆದಿದೆ. ಮೃತಪಟ್ಟ ವ್ಯಕ್ತಿ ಜಾರ್ಕಳದ ಕಾರ್ತಿಕ್‌ (26) ಎಂದು ಗುರುತಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಕಳದಿಂದ ಉಡುಪಿಗೆ ಹೋಗುತ್ತಿದ್ದ ಖಾಸಗಿ ಬಸ್ ಹಾಗೂ ಬೈಲೂರಿನಿಂದ ಜಾರ್ಕಳ ಕಡೆಗೆ ಸಾಗುತ್ತಿದ್ದ ಸ್ಕೂಟಿ ಮಧ್ಯೆ ಡಿಕ್ಕಿ ಹೊಡೆದಿದ್ದು, ಸವಾರ ಸ್ಥಳದಲ್ಲೇ ಸಾವನಪ್ಪಿದ್ದ ದಾರುಣ ಘಟನೆ ನಡೆದಿದೆ.

ಕಲ್ಲಿನ ಕೆಲಸ ಮಾಡುತ್ತಿದ್ದ ಕಾರ್ತಿಕ್‌ ಕೆಲಸ ಮುಗಿಸಿ ಮನೆಕಡೆಗೆ ತೆರಳುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಮೃತರು ಪತ್ನಿ ಮತ್ತು ಹತ್ತು ತಿಂಗಳ ಮಗುವನ್ನು ತೊರೆದ ದುರ್ದೈವಿ ಎನ್ನಲಾಗುತ್ತಿದೆ. ಘಟನಾ ಸ್ಥಳಕ್ಕೆ ಕಾರ್ಕಳ ನಗರ ಠಾಣೆ ಪೊಲೀಸರು ಆಗಮಿಸಿ‌ ಪರಿಶೀಲನೆ ನಡೆಸಿರುತ್ತಾರೆ.