Friday, January 24, 2025
ಸುದ್ದಿ

ಆಂಧ್ರಪ್ರದೇಶದಲ್ಲಿ ಭೀಕರ ಅಪಘಾತ : ಉಚ್ಚಿಲ ಭಾಸ್ಕರನಗರ ನಿವಾಸಿ ಬಷೀರ್ ಸಾವು – ಕಹಳೆ ನ್ಯೂಸ್

ಕಾಪು : ಆಂಧ್ರಪ್ರದೇಶದ ನಂಬೂರು ಎಂಬಲ್ಲಿ ನಡೆದ ಅಪಘಾತವೊಂದರಲ್ಲಿ ಉಚ್ಚಿಲ ಭಾಸ್ಕರನಗರದ ನಿವಾಸಿ ಬಷೀರ್ ಎಂಬಾತ ಸಾವನ್ನಪ್ಪಿದ್ದಾನೆ. ಮೀನಿನ ಲಾರಿಯಲ್ಲಿ ಚಾಲಕನಾಗಿದ್ದ ಬಷೀರ್, ಆಂಧ್ರಪ್ರದೇಶದ ನಂಬೂರು-ಕಝ ರಸ್ತೆಯಲ್ಲಿ ಸಾಗುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಲಾರಿಯೊಂದಕ್ಕೆ ಡಿಕ್ಕಿ ಹೊಡಿದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಭೀಕರ ಅಪಘಾತದಲ್ಲಿ ಬಷೀರ್ ಸಾವಿಗೀಡಾಗಿದ್ದಾನೆ. ಜೊತೆಗೆ ಡಿಕ್ಕಿಯಾದ ಲಾರಿಯ ಚಾಲಕ ಕೂಡ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಮೀನು ಸಾಗಾಟಕ್ಕಾಗಿ ಮಂಗಳವಾರ ಚೆನ್ನೈಗೆ ತೆರಳಿದ್ದ ಬಷೀರ್, ಅಲ್ಲಿ ಲಾರಿಯಲ್ಲಿ ಮೀನು ತುಂಬಿಸಿಕೊoಡು ಒಡಿಶಾಕ್ಕೆ ತೆರಳುತ್ತಿದ್ದರು. ಆಂಧ್ರಪ್ರದೇಶದ ನಂಬೂರು-ಕಝ ರಸ್ತೆಯಲ್ಲಿ ಸಾಗುತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

ಉಚ್ಚಿಲ ಭಾಸ್ಕರನಗರದ ಶಾಬುದ್ದೀನ್- ನಬಿಸಾ ಪುತ್ರನಾಗಿರುವ ಬಷೀರ್, ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದು, ಅವರ ಮೃತದೇಹವನ್ನು ಹುಟ್ಟೂರು ಉಚ್ಚಿಲಕ್ಕೆ ತರಲು ಅವರ ಸಹೋದರರು ಹಾಗೂ ಗೆಳೆಯರು ಆಂಧ್ರಪ್ರದೇಶಕ್ಕೆ ತೆರಳಿದ್ದಾರೆ.