Recent Posts

Friday, November 22, 2024
ಕ್ರೀಡೆಸುದ್ದಿ

ಹ್ಯಾಟ್ರಿಕ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಭಾರತ – ಕಹಳೆ ನ್ಯೂಸ್

ದುಬೈ: ಏಷ್ಯಾ ಕಪ್ 2018ರ ಫೈನಲ್ ಪಂದ್ಯದಲ್ಲಿ ಬಾಂಗ್ಲಾ ವಿರುದ್ಧ 3 ವಿಕೆಟ್ ರೋಚಕ ಜಯ ಸಾಧಿಸುವ ಮೂಲಕ ಭಾರತ ತಂಡ ಚಾಂಪಿಯನ್ಸ್ ಪಟ್ಟವನ್ನು ತನ್ನಲ್ಲೇ ಉಳಿಸಿಕೊಂಡಿದೆ. ಓವರ್ ಎಂಡಿಗ್ ಟೈಮ್‌ನಲ್ಲಿ ಮ್ಯಾಚ್ ಹೊಸ ಟ್ವಿಸ್ಟ್ಗೆ ತಲುಪಿತ್ತು. ಆದರೆ ಅಂತಿಮವಾಗಿ ರೋಹಿತ್ ಶರ್ಮಾ ಬಳಗ ಗೆಲುವಿನ ನಗು ಬೀರಿತು.

14ನೇ ಆವೃತ್ತಿಯ ಏಷ್ಯಾಕಪ್‌ನಲ್ಲಿ ಬುಧವಾರ ನಡೆದ ಸೂಪರ್ 4 ಹಂತದ ನಿರ್ಣಾಯಕ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಬಾಂಗ್ಲಾದೇಶವು 37 ರನ್ ಅಂತರದ ರೋಚಕ ಗೆಲುವು ದಾಖಲಿಸಿ, ಫೈನಲ್ ಆಡುವ ಅರ್ಹತೆ ಗಿಟ್ಟಿಸಿಕೊಂಡಿತು. ಭಾರತ ತಂಡದ ಸಾರಥ್ಯವನ್ನು ರೋಹಿತ್ ಶರ್ಮ, ಬಾಂಗ್ಲಾದೇಶ ತಂಡ ಸಾರಥ್ಯವನ್ನು ಮಸ್ರಾಫೆ ಬಿನ್ ಮೊರ್ತಾಜೋ ವಹಿಸಿಕೊಂಡಿದ್ದು ಫೈನಲ್ ದುಬೈಯ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಬಲು ರೋಚಕವಾಗಿ ಅಂತ್ಯಗೊಂಡಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಟಾಸ್‌ನಿಂದಲೇ ಸೋತು ಬ್ಯಾಟಿಂಗ್‌ಗೆ ಇಳಿಸಲ್ಟಟ್ಟ ಬಾಂಗ್ಲಾದೇಶ ಆರಂಭಿಕ ಬ್ಯಾಟ್ಸ್ಮನ್ ಲಿಟನ್ ದಾಸ್ ಆಕರ್ಷಕ ಶತಕವನ್ನು ಭಾರಿಸಿದ್ರು ಇದು ಬಾಂಗ್ಲಾದ ಪಾಲಿಗೆ ಪ್ಲಸ್ ಪಾಯಿಂಟ್ ಆಯಿತು. ನಂತರ ಬಂದ ಆಟಗಾರರು ಮೆಹಿದಿ ಹಸನ್ 32, ಸೌಮ್ಯ ಸರ್ಕಾರ್ 33 ರನ್ ನೆರವಿನೊಂದಿಗೆ 48.3 ಓವರ್ ಗೆ ಎಲ್ಲಾ ವಿಕೆಟ್ ಕಳೆದು 222 ರನ್ ಪೇರಿಸಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಬಾಂಗ್ಲಾ ನೀಡಿರುವ ೨೨೩ ರನ್ ಗುರಿ ಬೆನ್ನಟ್ಟಿದ ಭಾರತ ಆರಂಭಿಕ ಅಘಾತವನ್ನು ಅನುಭವಿಸಿತು. ಶಿಖರ್ ಧವನ್ ೧೫ ರನ್ ನೊಂದಿಗೆ ವಿಕೆಟ್ ಒಪ್ಪಿಸಿ ನಿರ್ಗಮಿಸಿದರು. ಅನಂತರ ರೋಹಿತ್ ಶರ್ಮಾ (48), ಅಂಬಾಟಿ ರಾಯುಡು (2), ದಿನೇಶ್ ಕಾರ್ತಿಕ್ (37), ಎಂಎಸ್ ಧೋನಿ (36) ನಿರ್ಗಮಿಸಿದ್ದರಿಂದ ಭಾರತಕ್ಕೆ ಸೋಲಿನ ಭೀತಿ ಕಾಡತೊಡಗಿತು. ಅಂತಿಮ ಓವರ್‌ನಲ್ಲಿ ಭಾರತಕ್ಕೆ ಕೇವಲ 6 ರನ್‌ನ ಅವಶ್ಯಕತೆಯಿತ್ತು. ಅಂತಿಮವಾಗಿ ಭಾರತ 50 ಓವರ್‌ಗೆ 7 ವಿಕೆಟ್ ಕಳೆದು ರೋಚಕ ರೀತಿಯಲ್ಲಿ 223 ರನ್ ಪೇರಿಸಿ ಜಯ ತನ್ನದಾಗಿಸಿಕೊಂಡಿತು.

2016ರಲ್ಲೂ ಭಾರತ ಚಾಂಪಿಯನ್ ಆಗಿ ಏಷ್ಯಾಕಪ್‌ನಲ್ಲಿ ಮೆರೆದಾಡಿತ್ತು. ಇಲ್ಲಿಗೆ ಭಾರತ ಇದು ಏಳನೇ ಬಾರಿಗೆ ಏಷ್ಯಾಕಪ್ ಟ್ರೋಫಿ ಎತ್ತಿದಂತಾಗಿದೆ. ಏಷ್ಯಾಕಪ್ ಇತಿಹಾಸಲ್ಲಿ ಇತ್ತಂಡಗಳ ಮುಖಾಮುಖಿ ಅನೇಕ ದಾಖಲೆಗೂ ಕಾರಣವಾಗಿವೆ. ಲಿಟನ್ ದಾಸ್ ಏಷ್ಯಾ ಕಪ್ 2018ರ ಫೈನಲ್‌ನಲ್ಲಿ ಬಾಂಗ್ಲಾ ಆಟಗಾರ ಈ ಅಪೂರ್ವ ಸಾಧನೆ ಮೆರೆದರು. ದುಬೈಯ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ 28 ಸೆಪ್ಟೆಂಬರ್ 2018ರಂದು ನಡೆದಿದ್ದ ಈ ಪಂದ್ಯದಲ್ಲಿ ದಾಸ್ ಆಕರ್ಷಕ 121 ರನ್ ಸಿಡಿಸಿದ್ದರು.