Sunday, November 24, 2024
ಸುದ್ದಿ

ಕೋಡಿ ಕಡಲತೀರದಲ್ಲಿ ಜಿಡ್ಡಿನ ಚೆಂಡುಗಳು ಪತ್ತೆ..!: ಜಲಚರಗಳಿಗೆ ಅಪಾಯ –ಕಹಳೆ ನ್ಯೂಸ್

ಕುಂದಾಪುರ: ಕೋಡಿ ಕಡಲತೀರದಲ್ಲಿ ಪಾದಗಳಿಗೆ ಅಂಟಿಕೊಳ್ಳುವ ಸಣ್ಣ, ಗಾಢ ಬಣ್ಣದ ಜಿಡ್ಡಿನ ಚೆಂಡುಗಳು ಕಾಣಿಸಿಕೊಂಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಹಿಂದೆಯೂ ಇಂತಹ ಪದಾರ್ಥ ಸಮುದ್ರತೀರದಲ್ಲಿದ್ದು, ಇದು ಮೀನುಗಾರರು ಹಾಗೂ ಪರಿಸರಪ್ರೇಮಿಗಳ ಆತಂಕಕ್ಕೆ ಕಾರಣವಾಗಿದೆ. ಇಂತಹ ಪದಾರ್ಥಗಳು ಕಡಲಾಮೆ, ಮೀನು ಸಹಿತ ಜಲಚರಗಳಿಗೆ ಮಾರಕವಾಗಿದೆ. ಪ್ರವಾಸೋದ್ಯಮದ ಮೇಲೂ ಹೊಡೆತ ಬೀಳುವ ಸಾಧ್ಯತೆಯಿದೆ.

ಸಮುದ್ರತೀರಕ್ಕೆ ಹೋದಾಗ ಈ ಟಾರ್ ಬಾಲ್ ಎಂದು ಕರೆಯಲ್ಪಡುವ ಈ ಜಿಡ್ಡಿನ ಚೆಂಡುಗಳು ಸಾಮಾನ್ಯವಾಗಿ ತೈಲ ಸೋರಿಕೆಯ ಅವಶೇಷಗಳಾಗಿವೆ. ಸಮುದ್ರದ ಮೇಲ್ಮೆಯಲ್ಲಿ ಕಚ್ಚಾ ತೈಲ ತೇಲಿದಾಗ ಅದರ ಭೌತಿಕ ಗುಣಲಕ್ಷಣಗಳು ಬದಲಾಗುತ್ತವೆ. ಗಾಳಿ ಮತ್ತು ಅಲೆಗಳು ಚಾಚಿದಾಗ ಮತ್ತು ತೈಲ ತೇಪೆಗಳನ್ನು ಸಣ್ಣ ತುಂಡುಗಳಾಗಿ ಟಾರ್‌ಬಾಲ್‌ಗಳು ರೂಪುಗೊಳ್ಳುತ್ತದೆ.

ಇದು ಮೈಗೆ, ಕಾಲಿಗೆ ಮೆತ್ತಿಕೊಂಡರೆ ತುರಿಕೆ, ಕಜ್ಜಿ ಮೊದಲಾದವುಗಳು ಉಂಟಾಗಬಹುದು. ಆದರಿಂದ ಟಾರ್ ಮೆತ್ತಿಕೊಂಡರೆ ಬೇಕಿಂಗ್ ಸೋಡಾ ಪೇಸ್ಟ್ ಅನ್ನು ಮಿಶ್ರಣ ಮಾಡಿ ಚರ್ಮವನ್ನು ನಿಧಾನವಾಗಿ ಉಜ್ಜಬೇಕು. ಸೋಪ್ ಮತ್ತು ನೀರಿನಿಂದ ಚೆನ್ನಾಗಿ ತೊಳೆಯಬೇಕು. ಇನ್ನು ಟಾರ್ ಸಮುದ್ರತೀರದಲ್ಲಿ ಕಂಡುಬoದರೆ ಸಮುದ್ರಕ್ಕೆ ಇಳಿಯುವ ದುಸ್ಸಾಹಸ ಮಾಡಬಾರದು.

ಕೋಡಿಯಲ್ಲಿ ಸಮುದ್ರದಿಂದ ಬೀಚ್‌ಗೆ ಟಾರ್‌ಬಾಲ್ ನ ರಾಶಿಯಿದ್ದು, ಬೀಚ್‌ಗೆ ಹೋಗುವವರಿಗೆ ದೊಡ್ಡ ತಲೆನೋವಾಗಿದೆ. ಇದು ಪಾದಗಳಿಗೆ ಎಣ್ಣೆ ಅಂಟಿಕೊoಡoತೆ ಅಂಟುತ್ತದೆ ಹಾಗಾಗಿ ಸಮುದ್ರದಲ್ಲಿ ಸ್ನಾನ ಮಾಡುವವರ ಮೈಗೆ ಅಂಟುವುದರಿAದ ಪ್ರವಾಸಿಗರು ಆಗಮಿಸಲು ಹಿಂದೇಟು ಹಾಕುತ್ತಿದ್ದಾರೆ. ಜತೆಗೆ ದುರ್ವಾಸನೆ. ಇದು ಪ್ರವಾಸೋದ್ಯಮದ ಮೇಲೆ ಪರಿಣಾಮ ಬೀರುವ ಸಾಧ್ಯತೆಯೂ ಇದ್ದು, ಬೀಚ್ ಪ್ರದೇಶಗಳನ್ನು ಒಳಗೊಂಡoತೆ ಸಮುದ್ರ ಪರಿಸರವನ್ನು ಇದು ಕಲುಷಿತಗೊಳಿಸುತ್ತದೆ.