ಬಹುಭಾಷಾ ನಟ ಆಶಿಶ್ ವಿದ್ಯಾರ್ಥಿ ಅವರು 57ನೇ ವಯಸ್ಸಿಗೆ ಎರಡನೇ ಮದುವೆಯಾಗಿದ್ದಾರೆ. ಈ ಕುರಿತು ನಟನನ್ನು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಈ ಟ್ರೋಲ್ ಬಗ್ಗೆ ನಟ ಪ್ರತಿಕ್ರಿಯಿಸಿದ್ದಾರೆ. ತಮ್ಮನ್ನು ಬುದ್ಧ ಸೇರಿದಂತೆ ಹಲವು ಹೆಸರುಗಳಿಂದ ಕರೆಯುತ್ತಿರುವುದಾಗಿ ತಿಳಿಸಿದ್ದಾರೆ.
ಟ್ರೋಲ್‌ಗೆ ಉತ್ತರಿಸಿದ ನಟ ನಮಗೆಲ್ಲರಿಗೂ ಒಂದು ದಿನ ವಯಸ್ಸಾಗುತ್ತದೆ. ಆಗ ನಾವು ನಮಗೆ ವಯಸ್ಸಾದ ಕಾರಣ ಈ ಕೆಲಸ ಮಾಡಬಾರದು ಎಂದು ಹೇಳಲು ಪ್ರಾರಂಭಿಸುತ್ತೇವೆ. ಹಾಗೆಂದ ಮಾತ್ರಕ್ಕೆ ನಾವು ಬೇಸರದಲ್ಲಿ ಸಾಯಬೇಕೆಂದು ಅರ್ಥವೇ ಎಂದು ಪ್ರಶ್ನಿಸಿದ್ದಾರೆ.
ಯಾರಿಗಾದರೂ ಸಂಗಾತಿ ಬೇಕೆನಿಸಿದರೆ, ಅವರೇಕೆ ಸಂಗಾತಿಯನ್ನು ಹೊಂದಬಾರದು? ನಾನು ಇಂಥಹ ಪ್ರತಿಕ್ರಿಯೆಗಳನ್ನು ಜನರಿಂದ ನಿರೀಕ್ಷಿಸಿರಲಿಲ್ಲ. ನನಗೆ ನಿಜಕ್ಕೂ ಶಾಕ್ ಆಯಿತು ಎಂದು ಹೇಳಿದ್ದಾರೆ.
ತಾನು ಜೀವನುದ್ದಕ್ಕೂ ಮೌಲ್ಯಗಳನ್ನು ಸೇರಿಸುತ್ತಲೇ ಬಂದಿದ್ದೇನೆ. ಮದುವೆಯಾಗಿ ಮಕ್ಕಳನ್ನು ಹೊಂದಿ ಕುಟುಂಬ ಹೊಂದಲು ಬಯಸುವ ವ್ಯಕ್ತಿಯನ್ನು ಕಾನೂನಾತ್ಮಕವಾಗಿ ಮದುವೆಯಾಗುವುದು ವೈಯಕ್ತಿಕ ಆಯ್ಕೆ ಎಂದಿದ್ದಾರೆ.
ನಂತರ ಪ್ರತಿಕ್ರಿಯಿಸಿದ ನಟ, ಕಮೆಂಟ್ ಮಾಡುತ್ತಿರುವವರು ಯಾರೂ ಬಂದು ನನ್ನ ಜೀವನವನ್ನು ನೋಡಿಕೊಳ್ಳುವುದಿಲ್ಲ. ಎಲ್ಲರಿಗೂ ತಮ್ಮ ವಯಸ್ಸಿನ ಹಂಗಿಲ್ಲದೆ ತಮ್ಮ ಖುಷಿಗಾಗಿ ಏನಾದರೂ ಮಾಡುವ ಕೆಪಾಸಿಟಿ ಇದೆ ಎಂದಿದ್ದಾರೆ.