Recent Posts

Monday, January 20, 2025
ಸುದ್ದಿ

`ಒಡಿಶಾದಲ್ಲಿ ಮತ್ತೊಂದು ಅನಾಹುತ.. : ರೈಲಿನಲ್ಲಿ ಕಾಣಿಸಿಕೊಂಡ ಬೆಂಕಿ –ಕಹಳೆ ನ್ಯೂಸ್

ಒಡಿಶಾದ ಬಾಲಸೋರ್‌ನಲ್ಲಿ ನಡೆದ ಭೀಕರ ರೈಲು ದುರಂತದ ಬೆನ್ನಲ್ಲೇ ನಿನ್ನೆ ನುವಾಪಾದ ಜಿಲ್ಲೆಯಲ್ಲಿ ಸಂಚರಿಸುತ್ತಿದ್ದ ದುರ್ಗ್ – ಪುರಿ ಎಕ್ಸ್ಪ್ರೆಸ್ ರೈಲಿನ ಕೋಚ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ನಿನ್ನೆ ಸಂಜೆ ಖರಿಯಾರ್ ರಸ್ತೆ ನಿಲ್ದಾಣವನ್ನು ತಲುಪುತ್ತಿದ್ದಂತೆ ರೈಲಿನ ಕೋಚ್‌ನಲ್ಲಿ ಹೊಗೆ ಕಾಣಿಸಿಕೊಂಡಿತು. ಘರ್ಷಣೆ ಮತ್ತು ಬ್ರೇಕ್‌ಗಳ ಅಪೂರ್ಣ ಬಿಡುಗಡೆಯಿಂದಾಗಿ ಬ್ರೇಕ್ ಪ್ಯಾಡ್‌ಗಳಲ್ಲಿ ಮಾತ್ರ ಬೆಂಕಿ ಕಾಣಿಸಿಕೊಂಡಿದೆ.

ಆದರೆ, ಯಾವುದೇ ಹಾನಿಯಾಗಿಲ್ಲ. ಒಂದು ಗಂಟೆಯೊಳಗೆ ಸಮಸ್ಯೆ ಸರಿಪಡಿಸಲಾಗಿದ್ದು, ಬಳಿಕ ರಾತ್ರಿ 11 ಗಂಟೆಗೆ ನಿಲ್ದಾಣದಿಂದ ರೈಲು ಹೊರಟಿತು ಎಂದು ಪೂರ್ವ ಕರಾವಳಿ ರೈಲ್ವೆ ಮಾಹಿತಿಯನ್ನ ನೀಡಿದೆ.

ಬೆಂಕಿ ಕಾಣಿಸಿಕೊಂಡ ವಿಷಯ ತಿಳಿಯುತ್ತಿದ್ದಂತೆ ಕೆಲ ಪ್ರಯಾಣಿಕರು ಆತಂಕಗೊoಡು ರೈಲಿನಿಂದ ಇಳಿದು ಹೊರಬಂದಿದ್ದಾರೆ.