ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಮಗಳು ವಾಙ್ಮಯಿ ಅವರ ಮದುವೆ ಬೆಂಗಳೂರಿನ ಟ್ಯಾಮರಿಂಡ್ ಟ್ರೀನಲ್ಲಿ ಸರಳವಾಗಿ ನೆರವೇರಿದೆ. ಸೀತಾರಾಮನ್ ಪುತ್ರಿ ವಾಙ್ಮಯಿ ಅವರು ಪ್ರತೀಕ್ ಅವರನ್ನು ವರಿಸಿದ್ದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಹೆಚ್ಚಿನ ಗಣ್ಯರು, ವಿವಿಐಪಿಗಳು ಇಲ್ಲದೇ ಸದ್ದಿಲ್ಲದೇ ವಿವಾಹ ನಡೆದಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಉಡುಪಿ ಶ್ರೀ ಅದಮಾರು ಮಠದ ಶ್ರೀ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರ ಶಿಷ್ಯೆ. ಶ್ರೀ ಅದಮಾರು ಮಠದ ಶ್ರೀ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಮತ್ತು ಶ್ರೀ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ವಧು ವರರನ್ನು ಹರಸಿ ಮಧುಪರ್ಕ, ಸೀರೆ, ಶಾಲು, ಗಂಧ ಪ್ರಸಾದವನ್ನು ಕಳುಹಿಸಿದ್ದು, ಶ್ರೀ ಮಠದ ವ್ಯವಸ್ಥಾಪಕರಾದ ಗೋವಿಂದ ರಾಜರು ಮತ್ತು ಶಿಷ್ಯರು ಮಂತ್ರಘೋಷದ ಮೂಲಕ ಇವೆಲ್ಲವನ್ನ ನೀಡಿದ್ದಾರೆ.
ಶ್ರೀ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಅನುಗ್ರಹಿಸಿ ಕಳುಹಿಸಿದ ಉಡುಪಿ ಸೀರೆಯನ್ನು ಮಾನ್ಯ ಶ್ರೀಮತಿ ನಿರ್ಮಲ ಸೀತಾರಾಮನ್ ಅವರಿಗೆ ನೀಡಲಾಯಿತು.