Recent Posts

Sunday, January 19, 2025
ಕ್ರೈಮ್ಬೆಂಗಳೂರುರಾಜ್ಯಸಿನಿಮಾಸುದ್ದಿ

ಬಹುಭಾಷಾ ನಟ ಅರ್ಜುನ್ ಸರ್ಜಾ ವಿರುದ್ಧದ ನಟಿ ಶ್ರುತಿ ಹರಿಹರನ್ ಮೀಟೂ ಕೇಸ್ ಗೆ ಬಿಗ್ ಟ್ವಿಸ್ಟ್ ; ಶ್ರುತಿಗೆ ಕೋರ್ಟ್ ನೋಟೀಸ್ – ಕಹಳೆ ನ್ಯೂಸ್

ಬೆಂಗಳೂರು: ಖ್ಯಾತ ನಟಿ ಶ್ರುತಿ ಹರಿಹರನ್ ಮೀಟೂ ಕೇಸ್ ಗೆ ಮತ್ತೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಬಿ ರಿಪೋರ್ಟ್ ಪ್ರಶ್ನಿಸಿದ್ದ ಶ್ರುತಿ ಹರಿಹರನ್ ಗೆ ಕೋರ್ಟ್ ನೋಟೀಸ್ ನೀಡಿದೆ.

ಬೆಂಗಳೂರಿನ 8ನೇ ಎಸಿಎಂಎಂ ನ್ಯಾಯಾಲಯ ನಟಿ ಶ್ರುತಿ ಹರಿಹರನ್ ಗೆ ನೋಟೀಸ್ ಜಾರಿ ಮಾಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅಲ್ಲದೇ ಪ್ರಕರಣ ಸಂಬಂಧ ಪೊಲೀಸರಿಗೂ ಸೂಕ್ತ ಸಾಕ್ಷಾಧಾರ ನೀಡುವಂತೆ ಸೂಚಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

2018ರಲ್ಲಿ ಬಹುಭಾಷಾ ನಟ ಅರ್ಜುನ್ ಸರ್ಜಾ ವಿರುದ್ಧ ನಟಿ ಶ್ರುತಿ ಹರಿಹರನ್ ಮೀಟೂ ಆರೋಪ ಮಾಡಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಪೊಲೀಸರು ಅರ್ಜುನ್ ಸರ್ಜಾ ವಿರುದ್ಧ ಸೂಕ್ತ ಸಾಕ್ಷಾಧಾರವಿಲ್ಲ ಎಂದು ಕೋರ್ಟ್ ಗೆ ಬಿ ರಿಪೋರ್ಟ್ ಸಲ್ಲಿಸಿದ್ದರು. ಪೊಲೀಸರು ಸಲ್ಲಿಸಿದ್ದ ಬಿ ರಿಪೋರ್ಟ್ ನ್ನು ಶ್ರುತಿ ಹರಿಹರನ್ ಪ್ರಶ್ನಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣ ಮತ್ತೆ ಸುದ್ದಿಯಲ್ಲಿದ್ದು, ಶ್ರತಿ ಹರಿಹರನ್ ಹಾಗೂ ಪೊಲೀಸರಿಗೆ ಕೋರ್ಟ್ ನೋಟೀಸ್ ನೀಡಿದೆ.