ಗ್ಯಾರಂಟಿ ಗೋಷಣೆ ಬಳಿಕ ಹಣ ಕ್ರೋಡೀಕರಣದತ್ತ ಸಿಎಂ : ಅಬಕಾರಿ ಇಲಾಖೆಗೆ 35 ಸಾವಿರ ಕೋಟಿ ಸಂಗ್ರಹದ ಟಾರ್ಗೆಟ್ –ಕಹಳೆ ನ್ಯೂಸ್
ಗ್ಯಾರಂಟಿಗಳ ಸುರಿಮಳೆಗೈದಿರುವ ಕಾಂಗ್ರೇಸ್ ಸರ್ಕಾರ ಇದೀಗ ಹಣ ಕ್ರೋಡೀಕರಣಕ್ಕೆ ಹಾದಿಯನ್ನ ಹುಡುಕುತ್ತಿದೆ. ಸಿದ್ದರಾಮಯ್ಯ ಸರ್ಕಾರ ಹಣದ ಸಂಗ್ರದತ್ತ ಗುರಿ ಇಟ್ಟಿದ್ದು, ಆದಾಯ ಮೂಲ ಹೊಂದಿರುವ ಇಲಾಖೆಗಳಿಗೆ ಟಾಸ್ಕ್ಕೊಟ್ಟಿದೆ.
ಕಾಂಗ್ರೆಸ್ ಸರ್ಕಾರ ಆರ್ಥಿಕ ಸಂಪನ್ಮೂಲ ಕ್ರೋಢೀಕರಣಕ್ಕೆ ಸಿದ್ಧತೆ ಮಾಡಿಕೊಂಡಿದ್ದು, 2021-22ರ ಸಾಲಿನಲ್ಲಿ 25 ಸಾವಿರ ಕೋಟಿ ಸಂಗ್ರಹದ ಗುರಿ ಹೊಂದಿತ್ತು. ಆದರೆ ಕೊಟ್ಟ ಟಾರ್ಗೆಟ್‌ಗಿಂತ 26 ಸಾವಿರ ಕೋಟಿ ಸಂಗ್ರಹ ಮಾಡಿತ್ತು. ಆದರೆ ಈ ಬಾರಿ ಆದಾಯ ಬರುವಂತಹ ಅಬಕಾರಿ ಇಲಾಖೆಗೆ 35 ಸಾವಿರ ಕೋಟಿ ಸಂಗ್ರಹದ ಟಾರ್ಗೆಟ್ ಕೊಟ್ಟಿದೆ. ಸಿಎಂ ಸಿದ್ದರಾಮಯ್ಯನವರು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ್‌ಗೆ ಸಿಎಂ ಹೆಚ್ಚಿನ ಆದಾಯ ಸಂಗ್ರಹಿಸಲು ಸೂಚನೆ ನೀಡಿದ್ದಾರೆ.
ಒಂದೆಡೆ ಉಚಿತ ಕೊಟ್ಟು ಇನ್ನೊಂದೆಡೆ ಹೆಚ್ಚಿಗೆ ಕಿತ್ತುಕೊಳ್ಲೋ ಪ್ಲಾನ್ ಸಕಾರ ಮಾಡ್ತಾ ಇದ್ಯಾ ಅನ್ನೋ ಪ್ರಶ್ನೇ ಜನಸಾಮಾನ್ಯರದ್ದಾಗಿದೆ.