Recent Posts

Monday, April 21, 2025
ಸುದ್ದಿ

ಕೋಡಿ ಗ್ರಾಮ ಬಡ ಮೀನುಗಾರರ ಹಕ್ಕು ಪತ್ರಕ್ಕೆ ರಿಯಾಯಿತಿ ದರ ನಿಗದಿಗೊಳಿಸುವಂತೆ ಕಂದಾಯ ಸಚಿವ ಬೈರೇಗೌಡರಿಗೆ ಶಾಸಕ ಕಿರಣ್ ಕೊಡ್ಗಿ ಮನವಿ – ಕಹಳೆ ನ್ಯೂಸ್

ಉಡುಪಿ ಜಿಲ್ಲೆ ಕುಂದಾಪುರ ವಿಧಾನ ಸಭಾ ಕ್ಷೇತ್ರದ ಕೋಡಿ ಕನ್ಯಾಣ ಗ್ರಾಮ ಪಂಚಾಯತ್ ಕೋಡಿ ಗ್ರಾಮದ ಬಡ ಮೀನುಗಾರರ ಹಕ್ಕು ಪತ್ರಕ್ಕೆ ನಿಗದಿಗೊಳಿಸಿದ ದರವನ್ನು ರಿಯಾಯಿತಿಗೊಳಿಸಿ ಹಕ್ಕು ಪತ್ರ ನೀಡಲು ಶಾಸಕ ಕಿರಣ್ ಕೊಡ್ಗಿ ಅವರು ಕಂದಾಯ ಸಚಿವ ಶ್ರೀ ಕೃಷ್ಣ ಬೈರೇಗೌಡರನ್ನು ವಿಕಾಸ ಸೌಧದಲ್ಲಿ ಭೇಟಿಯಾಗಿ ಮನವಿ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಸುಮಾರು 400ಕ್ಕೂ ಮಿಕ್ಕಿ ಅರ್ಜಿದಾರರ ಪೈಕಿ ಈಗಾಗಲೇ ಹಲವರಿಗೆ ಮಂಜೂರಾತಿ ನೀಡಲಾಗಿದ್ದು, ಕಂದಾಯ ಇಲಾಖೆ ನಿಗದಿಕರಿಸಿದ ಮೊತ್ತ ಪಾವತಿಸಲು ಬಡವರಿಗೆ ಕಷ್ಟ ಆದ್ದರಿಂದ, ಮಲ್ಪೆ ಪಡುಕರೆಯ ಕೊಳ ಗ್ರಾಮದಲ್ಲಿ ನೀಡಿರುವ ರಿಯಾಯಿತಿ ದರದ ಮಾದರಿಯಲ್ಲಿ ಕೋಡಿ ಗ್ರಾಮದ ಮೀನುಗಾರರಿಗೆ ಹಣ ಪಾವತಿಗೆ ಅವಕಾಶ ಮಾಡಿಕೊಡಬೇಕು ಎಂದು ಶಾಸಕ ಕೊಡ್ಗಿ ಕಂದಾಯ ಸಚಿವರಿಗೆ ಮನವಿ ಮಾಡಿದರು.

ಹಿಂದಿನ ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಅವರು ಇಲಾಖೆಯ ಮುಂದೆ ಮಂಡಿಸಿದ ಮಾಹಿತಿಗಳನ್ನು ಸಚಿವರಿಗೆ ನೀಡಿದ ಕೊಡ್ಗಿಯವರು ಬಹುಬೇಗ ದರ ರಿಯಾಯಿತಿ ಆದೇಶ ನೀಡುವಂತೆ ಮನವಿ ಮಾಡಿದ್ದಾರೆ. ಶಾಸಕ ಕಿರಣ್ ಕೊಡ್ಗಿ ಅವರೊಂದಿಗೆ ಮಾಜಿ ಸಚಿವ ಶ್ರೀ ಕೋಟ ಶ್ರೀನಿವಾಸ ಪೂಜಾರಿಯವರು ಉಪಸ್ಥಿತರಿದ್ದರು.

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ