Monday, January 20, 2025
ಸುದ್ದಿ

ಸೂರಿಕುಮೇರ್ ಅಬ್ದುಲ್ ರಝಾಕ್ ಸೌದಿ ಅರೇಬಿಯಾ ದಲ್ಲಿ ನಿಧನ – ಕಹಳೆ ನ್ಯೂಸ್

ಬಂಟ್ವಾಳ : ಮಾಣಿ ಸಮೀಪದ ಸೂರಿಕುಮೇರ್ ನಿವಾಸಿ ದಿ. ಸುಣ್ಣ ಅಬುಬಕ್ಕರ್ ರವರ ಪುತ್ರ ಅಬ್ದುಲ್ ರಝಾಕ್ (52) ಹೃದಯಾಘಾತ ದಿಂದ ಗುರುವಾರ ರಾತ್ರಿ ಸೌದಿ ಅರೇಬಿಯಾದ ಅಲ್ ಕೋಬರ್ ನಲ್ಲಿ ನಿಧನ ಹೊಂದಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕಳೆದ 15 ವರ್ಷಗಳಿಂದ ವಿದೇಶದಲ್ಲಿ ವೃತ್ತಿಯಲ್ಲಿ ಇದ್ದ ಅವರು ರಜೆಯಲ್ಲಿ ಮನೆಗೆ ಬಂದು ಮೂರು ತಿಂಗಳ ಹಿಂದೆಯಷ್ಟೇ ವಾಪಸ್ ಸೌದಿ ಅರೇಬಿಯಾಕ್ಕೆ ತೆರಳಿದ್ದರು.
ಸೌದಿ ಅರೇಬಿಯಾದಲ್ಲಿ ಇಂದು (ಶುಕ್ರವಾರ) ಆಡಳಿತ ಕಛೇರಿಗಳಿಗೆ ವಾರದ ರಜೆ ಇರುವ ಹಿನ್ನೆಲೆಯಲ್ಲಿ ಮೃತ ಶರೀರದ ಅಂತ್ಯಕ್ರಿಯೆ ಬಗ್ಗೆ ಯಾವುದೇ ತೀರ್ಮಾನ ಕೈಗೊಳ್ಳಲಾಗಿಲ್ಲ ಎಂದು ಕುಟುಂಬದ ಮೂಲಗಳು ತಿಳಿಸಿವೆ.ಮೃತರು ಪತ್ನಿ, ಇಬ್ಬರು ಪುತ್ರಿಯರ ಸಹಿತ ಅಪಾರ ಸಂಖ್ಯೆಯ ಬಂಧುಗಳನ್ನು ಅಗಲಿದ್ದಾರೆ.