Thursday, January 23, 2025
ರಾಜ್ಯವಾಣಿಜ್ಯಸುದ್ದಿ

ಕರೆಂಟ್ ಬಿಲ್ ಏರಿಕೆಯ ಬೆನ್ನಲ್ಲೇ ಸದ್ದಿಲ್ಲದೆ ಮದ್ಯ ಬೆಲೆ ಏರಿಕೆ ಮಾಡಿದ ಅಬಕಾರಿ ಇಲಾಖೆ ; ಯಾವೆಲ್ಲಾ ಬ್ರ್ಯಾಂಡ್ ಎಷ್ಟು ಬೆಲೆ ಏರಿಕೆ..!? – ಕಹಳೆ ನ್ಯೂಸ್

ಬೆಂಗಳೂರು: ಗೃಹಜ್ಯೋತಿ ಯೋಜನೆಯಲ್ಲಿ 200 ಯೂನಿಟ್ ಫ್ರೀ ಕರೆಂಟ್ ಸಿಗುತ್ತದೆ ಎಂದು ರಾಜ್ಯದ ಜನರು ಸಂತಸಪಟ್ಟರೆ ಕೆಲವೆಡೆ ವಿದ್ಯುತ್ ಬಿಲ್ ಅನ್ನು ದುಪ್ಪಟ್ಟು ಮಾಡಿ ಶಾಕ್ ನೀಡಲಾಗಿದೆ. ಕರೆಂಟ್ ಬಿಲ್ ದರ ಏರಿಕೆ ಬೆನ್ನಲ್ಲೇ ಅಬಕಾರಿ ಇಲಾಖೆಯಿಂದ (Excise Department) ಮದ್ಯ ಪ್ರಿಯರಿಗೆ ಮತ್ತೊಂದು ಶಾಕ್ ನೀಡಿದೆ.

ಅಬಕಾರಿ ಇಲಾಖೆ ಸದ್ದಿಲ್ಲದೆ ಮದ್ಯ (Alcohol) ಬೆಲೆ ಏರಿಕೆPrice Hike) ಮಾಡಿದೆ. ಸ್ಲಾಬ್‌ಗಳಲ್ಲಿ ಏರಿಕೆ ಮಾಡಲಾಗಿದ್ದು, ಬಿಯರ್‌ಗೆ 10 ರೂ. ಏರಿಕೆ ಮಾಡಲಾಗಿದೆ. ಹಾಗೂ ಹಾಟ್ ಡ್ರಿಂಕ್ಸ್‌ಗಳ ವಿವಿಧ ಬ್ರ್ಯಾಂಡ್‌ಗಳಿಗೆ ಬೇರೆ ಬೇರೆ ರೀತಿಯಾಗಿ ಬೆಲೆ ಏರಿಕೆ ಮಾಡಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಯಾವೆಲ್ಲಾ ಬ್ರ್ಯಾಂಡ್ ಎಷ್ಟು ಬೆಲೆ ಏರಿಕೆ?
650 ಎಂಎಲ್‌ನ ಬಿಯರ್ 160 ರಿಂದ 170 ರೂ. ಏರಿಕೆ ಮಾಡಲಾಗಿದೆ. ಮ್ಯಾಕ್ ಡ್ಯಾವೆಲ್ಸ್ 180 ಎಂಎಲ್ 198 ರಿಂದ 220 ರೂ.ಗೆ ಏರಿಕೆ. ಕಿಂಗ್ ಫಿಷರ್ 650 ಎಂಎಲ್‌ಗೆ 160 ರಿಂದ 170 ರೂ. ಏರಿಕೆ. ಟ್ಯೂಬರ್ಗ್ 160 ರಿಂದ 170 ರೂ.ಗೆ ಹೆಚ್ಚಳ. ಬಡ್ವ್ಯೇಷರ್ 200 ರಿಂದ 220 ರೂ. ಹೆಚ್ಚಳ. ಪವರ್ ಕೂಲ್ 100 ರಿಂದ 110 ರೂ. ಏರಿಕೆ. ಬಕಾರ್ಡಿ 275 ಎಂಎಲ್‌ಗೆ 90 ರಿಂದ 105 ರೂ. ಏರಿಕೆ ಮಾಡಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು