Sunday, November 24, 2024
ಕ್ರೈಮ್ಬೆಂಗಳೂರುರಾಜ್ಯಸುದ್ದಿ

ಫೇಕ್ ಪ್ರೋಫೈಲ್ ಸೃಷ್ಟಿಸಿ ಹಿಂದೂ ಯುವತಿಗೆ ವಂಚಿಸಿದ್ದ ಮುಸ್ಲಿಂ ಯುವಕ ಜಿಹಾದಿ ಮುದಾಸಿರ್ ಅಂದರ್..! – ಕಹಳೆ ನ್ಯೂಸ್

ಬೆಂಗಳೂರು : ಡೇಟಿಂಗ್ ಆಯಪ್‌ನಲ್ಲಿ ಹಿಂದೂ ಯುವಕನ ಹೆಸರಲ್ಲಿ ನಕಲಿ ಪ್ರೋಫೈಲ್ ಸೃಷ್ಟಿಸಿಕೊಂಡು ಹಿಂದೂ ಯುವತಿಗೆ ವಂಚಿಸಿದ್ದ ಮುಸ್ಲಿಂ ಯುವಕನನ್ನ ಅಮೃತಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ‌. ಮುದಾಸಿರ್ ಬಂಧಿತ ಆರೋಪಿಯಾಗಿದ್ದಾನೆ. ನೊಂದ ಯುವತಿ ನೀಡಿದ ದೂರಿನ ಆಧಾರದ ಮೇಲೆ ಹಿಂದೂ ಯುವಕನ ಹೆಸರಲ್ಲಿ ನಕಲಿ ವಂಚಿಸಿದ್ದ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ.

ಮುದಾಸಿರ್ ಯುವತಿಯರಿಗೆ ವಂಚಿಸಲೆಂದು ಬಂಬಲ್ ಹೆಸರಿನ ಡೇಟಿಂಗ್ ಆಯಪ್ ನಲ್ಲಿಅನಿರುಧ್ ಎಂಬ ಹೆಸರಿನಲ್ಲಿ ನಕಲಿ ಪ್ರೊಫೈಲ್ಹೊಂದಿದ್ದ. ಅದೇ ಆಯಪ್ ಮೂಲಕ ಸಂಗಾತಿಯ ಹುಡುಕಾಟದಲ್ಲಿದ್ದ ಯುವತಿಗೆ ಆರೋಪಿಯ ಪರಿಚಯವಾಗಿತ್ತು. ಒಂದಷ್ಟು ದಿನ ಪರಸ್ಪರ ಸಂದೇಶಗಳು ರವಾನೆಯಾದ ಬಳಿಕ ಮೊಬೈಲ್ ನಂಬರ್ ಎಕ್ಸ್‌ಚೇಂಜ್ ಆಗಿ ಇಬ್ಬರ ಮಾತುಕತೆ ಮದುವೆಯ ತನಕ ಬಂದಿತ್ತು.‌

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು

ಯುವತಿಯನ್ನ ಮದುವೆಯಾಗುವುದಾಗಿ ನಂಬಿಸಿದ್ದ ಆರೋಪಿ ಆಕೆಯೊಂದಿಗೆ ದೈಹಿಕ ಸಂಪರ್ಕ ಕೂಡ ಬೆಳೆಸಿದ್ದ. ಜೊತೆಗೆ ​ನನ್ನ ತಾಯಿಗೆ ಹುಷಾರಿಲ್ಲ ಚಿಕಿತ್ಸೆಗೆ ಹಣ ಬೇಕು ಅಂತಾ ಯುವತಿ ಬಳಿ 1 ಲಕ್ಷ ಹಣವನ್ನ ಪಡೆದಿದ್ದ.‌ ನಂತರ ನನ್ನ ತಾಯಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ಸುಳ್ಳಿನ ಕಥೆ ಕಟ್ಟಿದ್ದ. ಕೊನೆಗೆ ಸಹೋದರನನ್ನ ನೋಡಲು ದುಬೈಗೆ ಹೋಗಿ ಬರುತ್ತೇನೆಂದು ಹೇಳಿದ್ದ ಆರೋಪಿ ಫೋನ್ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗಿದ್ದ.‌

ಇತ್ತ ಮುದಾಸಿರ್ ನನ್ನು ಸಂಪರ್ಕಿಸಲು ಪ್ರಯತ್ನಿಸಿ ಯುವತಿ ವಿಫಲವಾಗಿದ್ದಾಳೆ. ಇದರಿಂದ ಆರೋಪಿಯ ಮೇಲೆ ಅನುಮಾನಗೊಂಡ ಯುವತಿಗೆ ಆತ ಹಿಂದೂ ಯುವಕನೇ ಅಲ್ಲ, ಹಿಂದೂ ಯುವತಿಯರನ್ನ ವಂಚಿಸಲೆಂದು ಧರ್ಮ ಹಾಗೂ ಹೆಸರು ಬದಲಾಯಿಸಿಕೊಂಡಿದ್ದಾನೆ. ಆತನ ಹೆಸರು ಮುದಾಸಿರ್ ಎಂಬುದು ತಿಳಿದು ಬಂದಿದೆ.