ಪುತ್ತೂರು ತಲ್ವಾರ್ ಜಳಪಿದ ಘಟನೆ : ಪ್ರಕರಣ ದಾಖಲಿಸಿ, ಸೂಕ್ತ ತನಿಖೆ – ಪ್ರಭಾರ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಸಿ.ಬಿ. ಪ್ರತಿಕ್ರಿಯೆ – ಕಹಳೆ ನ್ಯೂಸ್
ಪುತ್ತೂರು : ದರ್ಬೆಯ ಪ್ರತಿಷ್ಟಿತ ಶಾಪಿಂಗ್ ಮಾಲ್ ಸಿಬ್ಬಂದಿಗಳಿಗೆ ತಲ್ವಾರ್ ತೋರಿಸಿ ಬೆದರಿಕೆ ಹಾಕಿರುವ ಘಟನೆ ಪುತ್ತೂರಿನ ಬಾರ್ ಒಂದರ ಬಳಿ ನಡೆದಿದೆ, ಈ ಕುರಿತು ಪ್ರಕರಣ ದಾಖಲಿಸಿಕೊಂಡು ಸೂಕ್ತ ತನಿಖೆಯನ್ನು ಇಲಾಖೆ ನಡೆಸುತ್ತದೆ ಎಂದು ಪ್ರಭಾರ ವರಿಷ್ಠಾಧಿಕಾರಿ ರಿಶ್ಯಂತ್ ಸಿ.ಬಿ. ತಿಳಿಸಿದ್ದಾರೆ..
ಏನಿದು ಘಟನೆ…!?
ನಿನ್ನೆ ರಾತ್ರಿ ಶಾಪಿಂಗ್ ಮಾಲ್ ಸಿಬ್ಬಂದಿಗಳು ಎಂದಿನಂತೆ ತಮ್ಮ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ, ಅಲ್ಲೆ ಸಮೀಪದ ಬಾರ್ ಮುಂದೆ ಇದ್ದ ಯುವಕನೋರ್ವ ತಲ್ವಾರನ್ನ ತೋರಿಸಿ ಬೆದರಿಕೆ ಹಾಕಿದ್ದಾರೆ. ಇನ್ನು ತಲ್ವಾರ್ ಝಳಪಿಸಿದ ಯುವಕ ಗಾಂಜಾ ವೆಸನಿಗಳು ಎಂದು ಇಲ್ಲಿನ ಸ್ಧಳೀಯರು ದೂರಿದ್ದು,ಹೆದರಿದ ಸಿಬ್ಬಂದಿಯೋರ್ವ ಓಡುವ ಭರದಲ್ಲಿ ರಸ್ತೆಯಲ್ಲಿ ಬಿದ್ದು ತಲೆಯ ಭಾಗಕ್ಕೆ ಗಾಯವಾಗಿರುವುದಾಗಿ ತಿಳಿದುಬಂದಿದೆ. ಸ್ಧಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ತಲ್ವಾರ್ ತೋರಿಸಿ ಬೆದರಿಸಿದ ಯುವಕನ ವಿರುದ್ಧ ಶಾಪಿಂಗ್ ಮಾಲ್ ಸಿಬ್ಬಂದಿಗಳು ದೂರು ನೀಡಲು ಮುಂದಾಗಿದ್ದಾರೆ.