Thursday, January 23, 2025
ದಕ್ಷಿಣ ಕನ್ನಡಸುದ್ದಿ

ಮಂಗಳೂರಿನ ಕಾವೂರಿನಲ್ಲಿ ಮನೆ ಮೇಲೆ ಉರುಳಿ ಬಿದ್ದ ಮರ ; ಮೂವರಿಗೆ ಗಾಯ – ಕಹಳೆ ನ್ಯೂಸ್

ಮಂಗಳೂರು, ಜೂ 10 : ಬೃಹತ್‌ ಗಾತ್ರದ ಮರವೊಂದು ಮನೆಯ ಮೇಲೆ ಉರುಳಿ ಬಿದ್ದು ಮೂರು ಮಂದಿ ಗಾಯಗೊಂಡಿರುವ ಘಟನೆ ಕಾವೂರಿನಲ್ಲಿ ಬಿ.ಜಿ.ಎಸ್ ಶಾಲೆಯ ಹಿಂಭಾಗ ನಡೆದಿದೆ.

ಭಾರಿ ಮಳೆಯಿಂದಾಗಿ ಬೃಹತ್‌ ಗಾತ್ರದ ಮರವೊಂದು ಮನೆಯ ಮೇಲೆ ಉರುಳಿ ಬಿದ್ದ ಪರಿಣಾಮ ಮನೆಯ ಛಾವಣಿ ಸಂಪೂರ್ಣ ನಾಶವಾಗಿ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬೆಳಗ್ಗೆ 6 ಗಂಟೆ ವೇಳೆಗೆ ಮನೆ ಮಂದಿ ಇನ್ನೂ ಎಚ್ಚರಗೊಂಡಿರಲಿಲ್ಲ. ಅಷ್ಟೊತ್ತಿಗೆ ಪಕ್ಕದ ಕಂಪೌಂಡ್‌ನಿಂದ ಬೃಹತ್‌ ಗಾತ್ರದ ಮರವೊಂದು ಭಾರೀ ಶಬ್ದದೊಂದಿಗೆ ಬುಡ ಸಮೇತ ಈ ಮನೆಯ ಮೇಲೆ ಉರುಳಿ ಬಿದ್ದಿದೆ. ಇದರ ಪರಿಣಾಮವಾಗಿ ಮನೆಯ ಛಾವಣಿ ಮತ್ತು ಹಂಚುಗಳು ಪುಡಿ ಪಡಿಯಾಗಿ ಧರಾಶಾಹಿಯಾಗಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ಮನೆಯ ಒಳಗೆ 5 ಮಂದಿ ಮಲಗಿದ್ದು, ಅವರ ಪೈಕಿ ಮೂವರು ಹಂಚು ಮತ್ತು ಮರದ ಅವಶೇಷಗಳು ಬಿದ್ದು ಗಾಯಗೊಂಡಿದ್ದಾರೆ.