Friday, September 20, 2024
ಸುದ್ದಿ

ಧೂಳಿನಿಂದ ಅನಾರೋಗ್ಯ: ಪರಿಹಾರ ಕಾಣದ ಬಿಸಿರೋಡಿನ ನಿತ್ಯ ಸಮಸ್ಯೆ – ಕಹಳೆ ನ್ಯೂಸ್

ಮಂಗಳೂರು: ಧೂಳು ಇದು ಪರಿಹಾರ ಕಾಣದ ಬಿಸಿರೋಡಿನ ನಿತ್ಯದ ಸಮಸ್ಯೆ . ಧೂಳಿನ ಸಮಸ್ಯೆಯಿಂದ ಬಿಸಿರೋಡಿನ ನಗರ ವಾಸಿಗಳು ರೋಗದ ಭಯದಿಂದ ಬದುಕು ಸಾಗಿಸುವಂತಾಗಿದೆ….

ಬಿಸಿರೋಡಿನ ಕೈಕಂಬದಿಂದ ಮಾಣಿವರೆಗೂ ಧೂಳಿನ ಸಮಸ್ಯೆಯಿದ್ದು, ರಸ್ತೆಯಲ್ಲಿ ದ್ದ ಹೊಂಡ ಗುಂಡಿಗಳನ್ನು ತಾತ್ಕಾಲಿಕವಾಗಿ ಮುಚ್ಚಲು ಇಲಾಖೆಯಿಂದ ಸಿಮೆಂಟ್ ಹುಡಿಯನ್ನು ಹಾಕಲಾಗಿತ್ತು. ಆದರೆ ಮಳೆ ಕಡಿಮೆಯಾದ ಬಳಿಕ ಗುಂಡಿ ಮುಚ್ಚಲು ಹಾಕಿದ ಸಿಮೆಂಟ್ ಹುಡಿ ವಾಹನಗಳು ಹೋಗುವ ರಭಸಕ್ಕೆ ಎದ್ದು ದೂಳಿನ ರೂಪದಲ್ಲಿ ಜನರಿಗೆ ತೊಂದರೆ ಅಗುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬಿಸಿರೋಡಿನಲ್ಲಿ ಬಸ್ ಕಾಯುವ ಜನರ ಸಹಿತ ನಡೆದಾಡಲು ಸಾಧ್ಯವಿಲ್ಲದ ಪರಿಸ್ಥಿತಿ ಎದುರಾಗಿದೆ. ರಿಕ್ಷಾ ಚಾಲಕರಂತೂ ಮುಖಕ್ಕೆ ಬಟ್ಟೆ ಕಟ್ಟಿ ಬಾಡಿಗೆ ಮಾಡುತ್ತಿರುವ ಸನ್ನಿವೇಶ ಉಂಟಾಗಿದೆ.

ಜಾಹೀರಾತು

ಇನ್ನು ಹೋಟೆಲ್, ಅಂಗಡಿಗಳ ಒಳಗೆ ದೂಳು ಸೇರಿ ವ್ಯಾಪಾರವೂ ಇಲ್ಲದಂತಾಗಿದೆ. ಶಾಲಾ ಮಕ್ಕಳು ಸಹಿತ ಹಲವರಿಗೆ ಈಗಾಗಲೇ ದೂಳಿನ ಸಮಸ್ಯೆಯಿಂದ ಕೆಮ್ಮು ಹಾಗೂ ಅಲರ್ಜಿ ರೋಗಗಳಿಂದ ತತ್ತರಿಸಿದ್ದಾರೆ. ರಸ್ತೆಗೆ ಕನಿಷ್ಟ ಎರಡು ಬಾರಿ ನೀರು ಹಾಕುವಿರಾ ಎಂದು ಬಂಟ್ವಾಳ ರಿಕ್ಷಾ ಚಾಲಕ ಮಾಲಕ ಸಂಘದವರು ಇಲಾಖೆಗೆ ಮನವಿ ಮಾಡಿದ್ದಾರೆ. ರೋಗದ ಭಯದಿಂದ ಇರುವ ಜನರಿಗೆ ಇದರಿಂದ ಮುಕ್ತಿ ಬೇಕಾಗಿದೆ ಸಂಬಂಧಪಟ್ಟವರು ಸಮಸ್ಯೆ ಗೆ ಪರಿಹಾರ ನೀಡಬೇಕಾಗಿದೆ.