Thursday, January 23, 2025
ಬೆಂಗಳೂರುರಾಜ್ಯರಾಷ್ಟ್ರೀಯವಾಣಿಜ್ಯಸುದ್ದಿ

ಕರ್ಣಾಟಕ ಬ್ಯಾಂಕಿನ ಎಂಡಿ, ಸಿಇಒ ಶ್ರೀಕೃಷ್ಣನ್ ಹರಿಹರ ಶರ್ಮ ಅಧಿಕಾರ ಸ್ವೀಕಾರ – ಕಹಳೆ ನ್ಯೂಸ್

ಮಂಗಳೂರು: ಕರ್ಣಾಟಕ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಶ್ರೀಕೃಷ್ಣನ್ ಹರಿಹರ ಶರ್ಮ ಅವರು ಬೆಂಗಳೂರಿನ ಬುಲ್‌ಟೆಂಪಲ್‌ ರಸ್ತೆಯ ಬ್ಯಾಂಕಿನ ಕಚೇರಿಯಲ್ಲಿ ಶುಕ್ರವಾರ ಅಧಿಕಾರ ಸ್ವೀಕರಿಸಿದರು. ಇವರನ್ನು ಮುಂದಿನ ಮೂರು ವರ್ಷಗಳ ಅವಧಿಗೆ ನೇಮಕ ಮಾಡಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅಧಿಕಾರ ಸ್ವೀಕರಿಸಿ ಮಾತನಾಡಿದ ಶ್ರೀಕೃಷ್ಣನ್, ‘ಕರ್ಣಾಟಕ ಬ್ಯಾಂಕ್ ಕುಟುಂಬಕ್ಕೆ ಸೇರಲು ಬಹಳ ಹೆಮ್ಮೆಯಾಗುತ್ತಿದೆ. ನಂಬಿಕೆ ಮತ್ತು ಒಳ್ಳೆಯ ಹೆಸರನ್ನು ತಳಪಾಯವಾಗಿ ಬೆಳೆಸಿಕೊಂಡು ಸತತ ನೂರು ವರ್ಷಗಳ ಕಾಲವೂ ಲಾಭವನ್ನು ಘೋಷಿಸುತ್ತಾ ಬಂದಿರುವ ಈ ಬ್ಯಾಂಕಿನಲ್ಲಿ ಸೇವೆ ಸಲ್ಲಿಸುವುದು ನನಗೂ ಒಂದು ವಿಶೇಷವಾದ ಗೌರವವಾಗಿದೆ’ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

‘ಸದೃಢವಾದ ಕರ್ಣಾಟಕ ಬ್ಯಾಂಕ್ ತನ್ನ ಉತ್ತಮ ಸಿಬ್ಬಂದಿ ತಂಡದೊಂದಿಗೆ ನಂಬಿಕೆ ಮತ್ತು ಉತ್ಕೃಷ್ಟತೆ ಎಂಬ ಮೂಲ ತತ್ವಗಳಿಗೆ ಬದ್ಧವಾಗಿ ಹೆಜ್ಜೆಗುರುತನ್ನು ಇನ್ನಷ್ಟು ವಿಸ್ತರಿಸಲಿದೆ. ಗ್ರಾಹಕರ ಸರ್ವರೀತಿಯ ಬ್ಯಾಂಕಿಂಗ್ ಅವಶ್ಯಕತೆಗಳಿಗೆ ಸ್ಪಂದಿಸುತ್ತ, ಶೇರುದಾರರ ಆಶೋತ್ತರಗಳಿಗೆ ಪೂರಕವಾಗಿ ಬ್ಯಾಂಕ್ ಪ್ರಗತಿಯ ಪಯಣವನ್ನು ಮುಂದುವರಿಸಲಿದೆ’ ಎಂದು ಹೇಳಿದರು.

ಬ್ಯಾಂಕಿನ ಅಧ್ಯಕ್ಷ ಪಿ.ಪ್ರದೀಪ್ ಕುಮಾರ್ ಅವರು ನೂತನ ಎಂಡಿ ಹಾಗೂ ಸಿಇಒ ಅವರನ್ನು ಸ್ವಾಗತಿಸಿದರು. ಬ್ಯಾಂಕಿನ ನಿರ್ದೇಶಕರು, ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.

ಪರಿಚಯ: ಶ್ರೀಕೃಷ್ಣನ್ ಅವರು ಬ್ಯಾಂಕಿಂಗ್‌ನ ವಿವಿಧ ಕ್ಷೇತ್ರಗಳಲ್ಲಿ ಹಾಗೂ ತಂತ್ರಜ್ಞಾನ ಮತ್ತು ಪಾವತಿ ಕ್ಷೇತ್ರಗಳಲ್ಲಿ ಸುಮಾರು 40 ವರ್ಷಗಳ ಅನುಭವ ಹೊಂದಿದ್ದಾರೆ. ಈ ಮುಂಚೆ ಅವರು ಎಚ್‌ಡಿಎಫ್‌ಸಿ ಬ್ಯಾಂಕ್, ಯೆಸ್ ಬ್ಯಾಂಕ್ ಹಾಗೂ ಜಿಯೊ ಪೇಮೆಂಟ್ಸ್ ಬ್ಯಾಂಕ್‌ಗಳಲ್ಲಿ ಪ್ರಮುಖ ಹುದ್ದೆಗಳನ್ನು ನಿರ್ವಹಿಸಿದ್ದರು.

Srikrishnan Hari Hara Sarma, Managing Director & Chief Executive Officer, Karnataka Bank Ltd
Srikrishnan Hari Hara Sarma, Managing Director & Chief Executive Officer, Karnataka Bank Ltd

ಎಚ್‌ಡಿಎಫ್‌ಸಿ ಬ್ಯಾಂಕಿನಲ್ಲಿ ಇವರು ಸಂಸ್ಥಾಪಕ ತಂಡದ ಭಾಗವಾಗಿದ್ದರು. ಬ್ಯಾಂಕಿನ ಕಾರ್ಪೊರೇಟ್ ಮತ್ತು ರಿಟೆಲ್‌ ಬ್ಯಾಂಕಿಂಗ್‌, ಖಜಾನೆ ಮತ್ತು ಬಂಡವಾಳ ಮಾರುಕಟ್ಟೆಗಳ ಮೂಲಸೌಕರ್ಯ ವ್ಯವಹಾರವನ್ನು ನಿರ್ವಹಿಸುವುದರಲ್ಲಿ ತಮ್ಮ ಸೇವೆಯನ್ನು ಸಲ್ಲಿಸಿದ್ದಾರೆ.

ಯೆಸ್ ಬ್ಯಾಂಕ್ ಲಿಮಿಟೆಡ್‌ನಲ್ಲಿ ವಾಣಿಜ್ಯ ಬ್ಯಾಂಕಿಂಗ್ ಮೂಲಸೌಕರ್ಯವನ್ನು ನಿರ್ವಹಿಸುವುದರಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಜಿಯೊ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್‌ನಲ್ಲಿ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕರ್ತವ್ಯನಿರ್ವಹಿಸಿದ್ದರು.