Friday, January 24, 2025
ಸುದ್ದಿ

ಸಾಹಿತಿ ಪ. ರಾಮಕೃಷ್ಣ ಶಾಸ್ತ್ರಿ ಅವರ ಅಭಿನಂದನೆ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಅನಾವರಣ ಕಾರ್ಯಕ್ರಮ –ಕಹಳೆ ನ್ಯೂಸ್

ಜು.೮ರಂದು ಬೆಳ್ತಂಗಡಿ ಎಸ್ ಡಿ ಎಂ ಕಲಾಭವನದಲ್ಲಿ ನಡೆಯುವ ಸಾಹಿತಿ ಪ. ರಾಮಕೃಷ್ಣ ಶಾಸ್ತ್ರಿ ಅವರ ಅಭಿನಂದನೆ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಅನಾವರಣ ಕಾರ್ಯಕ್ರಮ ಬೆಳ್ತಂಗಡಿಯ ಸುವರ್ಣ ಆರ್ಕೇಡ್‌ನಲ್ಲಿ ನಡೆಯಿತು. ಕಟ್ಟದಬೈಲು ಶಾಲಾ ಮುಖ್ಯಶಿಕ್ಷಕ, ರಾಜ್ಯಪ್ರಶಸ್ತಿ ಪುರಸ್ಕೃತ ಶಿಕ್ಷಕ ಎಡ್ವರ್ಡ್ ಡಿಸೋಜಾ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದ್ರು. ಬಳಿಕ ಮಾತನಾಡಿ, ಸಮಾಜದ ವಿವಿಧ ಸ್ತರಗಳಲ್ಲಿ ಅಡಗಿರುವ ಸಾಧಕ ಪ್ರತಿಭೆಗಳನ್ನು ಹುಡುಕಿ ಲೋಕಕ್ಕೆ ಪರಿಚಯಿಸುವ ಕಾರ್ಯ ನಡೆಸುತ್ತಿರುವವರು ಸಾಹಿತಿ ಪ.ರಾಮಕೃಷ್ಣ ಶಾಸ್ತ್ರಿ ಅವರು ಎಂದ್ರು. ಶೈಲೇಶ್ ಉಜಿರೆ ರಚಿಸಿದ, ಅಭಿನಂದನ ಕಾರ್ಯಕ್ರಮದ ಲಾಂಛನವನ್ನು ನ್ಯಾಯವಾದಿ ಶಿವಕುಮಾರ್ ಎಸ್.ಎನ್. ಅನಾವರಣಗೊಳಿಸಿ, ಸಾಹಿತ್ಯದ ಮೂಲಕ ಚಿರಪರಿಚಿತರಾದ ಶಾಸ್ತ್ರಿಗಳನ್ನು ಅಭಿನಂದಿಸುವುದು ಸಮಾಜ ಅವರ ಕೆಲಸಕ್ಕೆ ನೀಡುವ ಗೌರವದಂತೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು

ಅಧ್ಯಕ್ಷತೆ ವಹಿಸಿದ್ದ ಸಮಿತಿಯ ಸಂಚಾಲಕ ಸಂಪತ್ ಬಿ. ಸುವರ್ಣ ಮಾತನಾಡಿ ಸಾಹಿತಿಯೊಬ್ಬರನ್ನು ಗೌರವಿಸುವುದು ಸಮಾಜದ ಸ್ವಸ್ಥ ಸಮಾಜದ ಪ್ರತಿಬಿಂಬವಾಗಿರುತ್ತದೆ ಎಂದರು. ಕಲಾವಿದ, ಸಂಘಟಕ ಎನ್.ಅಶೋಕ ಭಟ್ ಉಜಿರೆ ನಿರ್ವಹಿಸಿದರು. ಅಭಿನಂದನ ಕಾರ್ಯಕ್ರಮದ ಪೂರ್ವಭಾವಿ ಸಮಾಲೋಚನ ಸಭೆ ನಡೆಯಿತು. ಪ್ರಾಚಾರ್ಯ ಡಾ.ಎನ್.ಎಂ.ಜೋಸೆಫ್, ಉದ್ಯಮಿಸೂರ್ಯ ನಾರಾಯಣ ಭಟ್ ಮಚ್ಚಿನ, ಶಿಕ್ಷಕರಾಮಕೃಷ್ಣ ಭಟ್ ಬಳಂಜ, ಮಾಜಿ ಸೈನಿಕಕಾಂಚೋಡು ಗೋಪಾಲಕೃಷ್ಣ ಭಟ್, ಮುಖ್ಯೋಪಾಧ್ಯಾಯ ರಾಮಕೃಷ್ಣ ಭಟ್ ಬೆಳಾಲು, ಹಾಗೂ ಮತ್ತಿತರರು ಉಪಸ್ಥಿತರಿದ್ದರು.