Friday, January 24, 2025
ಸುದ್ದಿ

ಒಮ್ನಿ ಕಾರು ಹಾಗೂ ಅಲ್ಟೋ ಕಾರುಗಳ‌ ನಡುವೆ ಮುಖಾಮುಖಿ ಡಿಕ್ಕಿ –ಕಹಳೆ ನ್ಯೂಸ್

ಬಂಟ್ವಾಳ: ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಚಾಲಕರಿಬ್ಬರು ಸಹಿತ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಒಟ್ಟು ಏಳು ಬಂದ ಪ್ರಯಾಣಿಕರಿಗೆ ಅಲ್ಪಸ್ವಲ್ಪ ಪ್ರಮಾಣದಲ್ಲಿ ಗಾಯಗಳಿಂದ ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾದ ಘಟನೆ ಸರಪಾಡಿ ಎಂಬಲ್ಲಿ ಜೂನ್ 9 ರಂದು ರಾತ್ರಿ ವೇಳೆ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಸರಪಾಡಿ ಗ್ರಾಮದ ಪೆರಿಯಪಾದೆ ಎಂಬಲ್ಲಿ ಒಮ್ನಿ ಕಾರು ಹಾಗೂ ಅಲ್ಟೋ ಕಾರುಗಳ‌ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಎರಡು ಕಾರುಗಳ ಚಾಲಕರ ಸಹಿತ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಸಹಪ್ರಯಾಣಿಕರು ಅಲ್ಪಸ್ವಲ್ಪ ಪ್ರಮಾಣದಲ್ಲಿ ಗಾಯಗಳಾಗಿದೆ. ಅಲ್ಟೋ ಕಾರು ಚಾಲಕನ ಅಜಾಗರೂಕತೆಯಿಂದ ಅಪಘಾತ ನಡೆದಿದೆ ಕಾರು ಚಾಲಕ ಆಶ್ರಫ್ ನ ಮೇಲೆ ಒಮ್ನಿ ಕಾರು ಚಾಲಕ ಅಭಿಜಿತ್ ಅವರು ಮೆಲ್ಕಾರ್ ಟ್ರಾಫಿಕ್ ಪೋಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಓಮ್ನಿ ಕಾರಿನಲ್ಲಿ ಸಹಪ್ರಯಾಣಿಕನಾಗಿದ್ದ ಅಕ್ಷಯ್ ಪ್ರಭು ಹಾಗೂ ಅಲ್ಟೋ ಕಾರುನಲ್ಲಿ ಪ್ರಯಾಣಿಸುತ್ತಿದ್ದ ಜುಲೈಕಾ, ಮೈಮುನಾ,ಸುಹೈಲ್ ಮತ್ತು ಅಫಿಯಾ ರವರಿಗೆ ಸಣ್ಣ ಪುಟ್ಟ ಗಾಯಗಳಾಗಿದೆ. ಗಾಯಗೊಂಡವರು ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದಿದ್ದಾರೆ. ಘಟನೆಯಿಂದ ಎರಡು ಕಾರುಗಳು ಜಖಂಗೊಂಡಿದೆ. ಘಟನಾ ಸ್ಥಳಕ್ಕೆ ಮೆಲ್ಕಾರ್ ಟ್ರಾಫಿಕ್ ಪೋಲೀಸರು ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.