Friday, January 24, 2025
ಸುದ್ದಿ

ರೂಪಾಳನ್ನು ವಿರೂಪಗೊಳಿಸಿ ಭೀಕರವಾಗಿ ಕೊಲೆಗೈದಿದ್ದ ; ಸಂಬಂಧಿ ರಾಕೇಶ ಅರೆಸ್ಟ್ – ಕಹಳೆ ನ್ಯೂಸ್

ಧಾರವಾಡ : ಗೋವನಕೊಪ್ಪದ ಹೊರವಲಯದಲ್ಲಿ ನಡೆದಿದ್ದ ರೂಪಾ ಎಂಬ ಮಹಿಳೆಯ ಕೊಲೆ ಮಾಡಿದ ಕೊಲೆಗಾರನನ್ನು ಬಂದನ ಮಾಡುವಲ್ಲಿ ಧಾರವಾಡ ಗ್ರಾಮೀಣ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದು, ರೂಪಾ ಸ್ಪಂದನೆ ಮಾಡಲಿಲ್ಲ ಎಂದು ಸಂಬAಧಿ ಯೊಬ್ಬನೇ ಮಹಿಳೆಯನ್ನು ಕೊಲೆ ಮಾಡಿದ್ದಾಗಿ ಇದೀಗ ಪೊಲೀಸ್ ತನಿಖೆ ಇಂದು ತಿಳಿದು ಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕಳೆದ ಎರಡು ದಿನಗಳ ಹಿಂದೆ ಧಾರವಾಡ ತಾಲ್ಲೂಕಿನ ಗೋವನಕೊಪ್ಪ ಗ್ರಾಮದ ಹೊರವಲಯದಲ್ಲಿ ಮಹಿಳೆಯೊಬ್ಬಳ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಭೀಕರವಾಗಿ ಕೊಲೆ ಮಾಡಲಾಗಿತ್ತು, ಈ ಸಂಬoಧ ತನಿಖೆಗೆ ಇಳಿದ ಧಾರವಾಡ ಗ್ರಾಮೀಣ ಠಾಣೆಯ ಪೊಲೀಸರು ಹಲವು ಆಯಾಮಗಳಿಂದ ತನಿಖೆಯನ್ನು ನಡೆಸಿದಾಗ ಈ ಮಹಿಳೆಯ ಕೊಲೆ ಮಾಡಿದ್ದು ಈತನ ಸಂಬAಧಿ ಧಾರವಾಡದ ಎಂ ಆರ್ ನಗರದ ರಾಕೇಶ ಎಂಬಾತನನ್ನು ಬಂಧನ ಮಾಡಿ ಪೊಲೀಸರು ವಿಚಾರಣೆ ನಡೆಸಿದಾಗ ರಾಕೇಶ ಕೊಲೆ ಮಾಡಿರೋ ಮಾಹಿತಿ ಒಪ್ಪಿಕೊಂಡಿದ್ದಾನೆ.

ಧಾರವಾಡ ಕೊಂಡಿವಾಡ ಓಣಿಯ ರೂಪಾ ಹಾಗೂ ಧಾರವಾಡದ ಎಂ ಆರ್ ನಗರದ ಆಕೆಯ ಸಂಬ0ಧಿ ರಾಕೇಶ ನಡುವೆ ಅನೈತಿಕ ಸಂಬAದವಿತ್ತAತೆ, ಇದು ಕೆಲವು ದಿನಗಳಿಂದ ನಡೆದುಕೊಂಡು ಬಂದಿದೆ ಆದ್ರೆ ಹಣದ ಹಪಾಹಪಿಯಾದ ರಾಕೇಶ ರೂಪಾಳಿಗೆ ಹಣವನ್ನು ಕೊಡು ಇಲ್ಲವಾದ್ರೆ ನಮ್ಮಿಬ್ಬರ ಅಕ್ರಮ ಸಂಬAಧವನ್ನು ಮನೆಯಲ್ಲಿ ಹೇಳುತ್ತೇನೆ ಅಂತಾ ಬ್ಲ್ಯಾಕ್ಮೇಲ್ ಕೂಡಾ ಮಾಡುತ್ತಿದ್ದನಂತೆ,ಹೀಗಾಗಿ ಎರಡು ದಿನಗಳ ಹಿಂದೆ ನಿನ್ನ ಜೊತೆ ಮಾತನಾಡುವುದು ಇದೆ ಎಂದು ರೂಪಾಳನ್ನು ಗೋವನಕೊಪ್ಪದ ಬಳಿ ಕರೆಸಿಕೊಂಡು ಆಕೆಯ ತಲೆಯ ಮೇಲೆ ಕಲ್ಲು ಹಾಕಿ ಅಲ್ಲಿಂದ ಕಾಲ್ಕಿತ್ತಿದ್ದ.

ಅಷ್ಟೇ ಅಲ್ಲದೆ ಮಾರನೆಯ ದಿನ ತಾನೇ ಕೊಲೆ ಮಾಡಿದ ರೂಪಾಳ ಮೃತದೇಹದ ಬಳಿ ನಿಂತು ಇದು ಆಸ್ತಿಯ ವಿಚಾರಕ್ಕಾಗಿ ಈ ಕೊಲೆಯನ್ನು ಮಾಡಿರಬೇಕು ಎಂದು ಮಾಧ್ಯಮದವರಿಗೆ ಹೇಳಿಕೆ ನೀಡಿ ಪೊಲೀಸರ ತನಿಖೆ ದಿಕ್ಕನ್ನು ತಪ್ಪಿಸಲು ರಾಕೇಶ ಪ್ಲ್ಯಾನ್ ಕೂಡಾ ಮಾಡಿದ್ದ,ಆದ್ರೆ ಪೊಲೀಸರ ಚಾಣಾಕ್ಷತನದ ಮುಂದೆ ರಾಕೇಶನ ಚಾಣಾಕ್ಷತನ ನಡೆಯದೇ ಇದೀಗ ಕೈಗೆ ತೊಳತೊಡಿಸಿಕೊಂಡಿದ್ದಾನೆ.

ಬೈಟ್: ಧಾರವಾಡ ಎಸ್ ಪಿ ಲೊಕೇಶ್ ಜಗಲಾಸುರ ಒಟ್ಟಿನಲ್ಲಿ ಗಂಡ ಜೊತೆ ಇದ್ರು ಕೂಡಾ ಅಕ್ರಮ ಸಂಬಂಧಕ್ಕೆ ಒಲವು ತೋರಿದ್ದ ರೂಪಾ ಭೀಕರವಾಗಿ ಕೊಲೆ ಆದ್ರೆ,ಅಕ್ರಮವನ್ನೇ ಮುಂದಿಟ್ಟುಕೊಂಡು ಹಣ ಪೀಕಲು ಮುಂದಾಗಿದ್ದ ಸಂಬಂಧಿ ರಾಕೇಶ ಇದೀಗ ಜೈಲು ಪಾಲಾಗಿದ್ದಾನೆ