Thursday, January 23, 2025
ಸುದ್ದಿ

ಮಂಗಳೂರಿನ ಸುರತ್ಕಲ್ ಲಾಡ್ಜ್ ಯಲ್ಲಿ ಅಂದರ್ ಬಾಹರ್ ಅಡ್ಡೆ : 9 ಮಂದಿಯ ಬಂಧನ –ಕಹಳೆ ನ್ಯೂಸ್

ಮಂಗಳೂರು : ಮಂಗಳೂರು ಹೊರ ವಲಯದ ಸುರತ್ಕಲ್ ಮುಕ್ಕ ಚೆಕ್ ಪೋಸ್ಟ್ ಬಳಿಯ ಲಾಡ್ಜ್ ಯಲ್ಲಿ ಅಂದರ್ ಬಾಹರ್ ಇಸ್ಪೀಟ್ ಆಡುತ್ತಿದ್ದ 7 ಮಂದಿ ಹಾಗೂ ಇಬ್ಬರು ಲಾಡ್ಜ್ ಸಿಬ್ಬಂದಿಯನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇಸ್ಪೀಟ್ ಆಟವಾಡುತ್ತಿದ್ದವರನ್ನ, ಮುಲ್ಕಿ ಕೊಲ್ನಾಡು ಲಿಂಗಪ್ಪಯ್ಯ ಕಾಡು ನಿವಾಸಿಗಳಾದ ಲಾಲ್ ಸಾಬ್ (31), ಅಮೀರ್ ಘಣಿಸಾಬ್ (31), ದಸ್ತಗಿರ್ ಸಾಬ್ (32), ಸಿದ್ದಣ್ಣ (47 ) ಮುಹಮ್ಮದ್ ರಫೀಕ್ (34), ಪರಶುರಾಮ (29), ಜಿತೇಂದ್ರ ಹೀರಾಸಿಂಗ್ (34) ಹಾಗೂ ಜೂಜು ಆಡಲು ಸ್ಥಳ ನೀಡಿದ್ದ ಲಾಡ್ಜ್ ಮ್ಯಾನೇಜರ್ ಪಡುಬಿದ್ರೆ ಪಲಿಮಾರು ನಿವಾಸಿ ಬಾಬು ಚಂದ್ರಶೇಖರ್ (62) ಸಿಬ್ಬಂದಿ ಹೆಜಮಾಡಿ ಕೊಡಿ ನಿವಾಸಿ ರಕ್ಷಿತ್ (23) ಎಂದು ಗುರುತಿಸಲಾಗಿದ್ದು, 9 ಮಂದಿಯನ್ನ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳಿAದ ಆಟದಲ್ಲಿ ಪಣಕ್ಕೆ ಇಟ್ಟಿದ್ದ 26,020 ರೂ. ನಗದು, 9 ಮೊಬೈಲ್ ಫೋನ್ ಗಳು, 1 ಎರ್ಟಿಗಾ ಕಾರು ಮತ್ತು ಆಡಲು ಉಪಯೋಗಿಸಿದ್ದ ಇಸ್ಪೀಟ್ ಎಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿಗಳ ವಿರುದ್ಧ ಐಪಿಸಿ ಕಲಂ 79, 80 ಕೆ.ಪಿ. ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.